
ಹಿರಿಯೂರು:
ತಾಲ್ಲೂಕಿನಲ್ಲಿ 2025ನೇ ಸಾಲಿನಲ್ಲಿ ಶೇಕಡ 14 ರಷ್ಟು ಬಿತ್ತನೆಯಾಗಿದ್ದು, ಮುಂಗಾರಿನ ಹಂಗಾಮಿನಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ರೈತರು ಬಿತ್ತನೆ ಮಾಡಿದ್ದ ಶೇಂಗಾ, ಸೂರ್ಯಕಾಂತಿ, ಈರುಳ್ಳಿ, ಮೆಕ್ಕೆಜೋಳ, ಇತರೆ ಬೆಳೆಗಳು ರೈತರ ಕೈಸೇರದೇ ನಷ್ಟ ಅನುಭವಿಸಿದ್ದಾರೆ, ಸರ್ಕಾರ ಈ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು ಎಂಬುದಾಗಿ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಬೆಳೆ ನಷ್ಟ ಪರಿಹಾರ ಮತ್ತು ಬೆಳೆ ವಿಮೆ ಶೀಘ್ರವಾಗಿ ರೈತರ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತಸಂಘದ ವತಿಯಿಂದ ತಾಲ್ಲೂಕು ತಹಶೀಲ್ದಾರರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಬೆಳೆ ನಷ್ಟ ಪರಿಹಾರ ಮತ್ತು ಕಾಡುಪ್ರಾಣಿಗಳಿಂದ ಬೆಳೆಹಾನಿ ಸಂಭವಿಸಿರುವ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮುಖಾಂತರ ಬೆಳೆವಿಮೆ ಪರಿಹಾರದ ಹಣವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸುತ್ತದೆ ಎಂಬುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ಎಂ.ಲಕ್ಷ್ಮೀಕಾಂತ್, ಗೌಸ್ ಪೀರ್, ಕಾರ್ಯಾಧ್ಯಕ್ಷರಾದ ಹೆಚ್.ದಸ್ತಗೀರ್, ಯುವಘಟಕದ ಅಧ್ಯಕ್ಷರಾದ ಆರ್.ಚೇತನ್ ಯಳನಾಡು, ರೈತಮುಖಂಡರುಗಳಾದ ತಿಪ್ಪೇಸ್ವಾಮಿ, ಎಂ.ಶಶಿಕಲಾ, ಎಂ.ಆರ್.ಪುಟ್ಟಸ್ವಾಮಿ, ಬಿ.ಡಿ.ಶ್ರೀನಿವಾಸ್, ಅನ್ಸರ್ ಅಲಿ, ಟಿ.ಮುನಿಸ್ವಾಮಿ, ಹೆಚ್.ಆರ್.ತಿಪ್ಪೇಸ್ವಾಮಿ, ಹನುಮಂತಪ್ಪ, ಎಸ್.ಆರ್.ರಂಗಸ್ವಾಮಿ, ಟಿ.ತಿಪ್ಪೇರುದ್ರಪ್ಪ, ಎನ್.ನಾಗರಾಜ, ಆರ್.ರವೀಂದ್ರನಾಥ, ಎಸ್.ಚಿಕ್ಕತಿಮ್ಮಯ್ಯ, ವಿ.ಸತ್ಯನಾರಾಯಣ, ಪಿ.ನಾಗರಾಜ್, ಕೆ.ರುದ್ರಪ್ಪ, ಒ.ಗಿರೀಶ್, ಮೊಹಿದ್ದೀನ್, ಭಾಷಾಸಾಬ್, ಈಶ್ವರಗೆರೆ ನಾಗರಾಜ್, ಮಲ್ಲೇಣು ನಾಗರಾಜ್, ಅಂಗುರಾಜ್, ಸುಧಾನಂದ್, ಸೋಮಸುಂದರ್, ಗಿರಿಸ್ವಾಮಿ, ಉಮಾಪತಿ, ನೂರುಲ್ಲಾ ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು.
