October 28, 2026
570589036_1970458353808827_4876703592570787441_n

ಹಿರಿಯೂರು :

ಛಾಯಾಗ್ರಹಣ, ಪತ್ರಿಕಾ ವೃತ್ತಿ, ವೈದ್ಯಕೀಯ ಛಾಯಾಗ್ರಹಣ, ಸಿನಿಮಾ ಛಾಯಾಗ್ರಹಣ, ಸಿನಿಮಾ ಸ್ಥಿರಚಿತ್ರಣ, ಛಾಯಾಚಿತ್ರ ಶಿಕ್ಷಣ, ವನ್ಯಜೀವಿ, ಛಾಯಾಗ್ರಹಣ ಹೀಗೆ ಎಲ್ಲಾ ವಿಭಾಗಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಪ್ರಖ್ಯಾತ ಛಾಯಾಗ್ರಾಹಕರಲ್ಲಿ ಒಬ್ಬರಾದ ಎಸ್.ತಿಪ್ಪೇಸ್ವಾಮಿ ಬಿನ್ ಆಲೂರುಸಿದ್ಧಣ್ಣ ನವರಿಗೆ “ಹಿರಿಯೂರುನ್ಯೂಸ್” ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.

ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮ ಅತ್ಯಂತ ಆತ್ಮೀಯರು ಹಾಗೂ ನಮ್ಮ ಬಂಧುಗಳು ಆದ ಪ್ರಖ್ಯಾತ ಛಾಯಾಗ್ರಾಹಕ ಶ್ರೀಯುತ ಎಸ್.ತಿಪ್ಪೇಸ್ವಾಮಿಯವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಆ ಭಗವಂತ ಆರೋಗ್ಯ, ಆಯಸ್ಸು, ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *