
ಹಿರಿಯೂರು :
ಕ್ಷೇತ್ರದ ಪ್ರತಿಯೊಬ್ಬ ಪದವೀಧರನ ಧ್ವನಿಯಾಗಿ ನಿಲ್ಲಲು ಎನ್‌ಡಿಎ ಮೈತ್ರಿ ಪಡೆ ಅಖಾಡಕ್ಕಿಳಿದಿದೆ. ಸಮರ್ಥ ನಾಯಕರಾದ ಶ್ರೀ ಕೆ.ಎಂ.ಸುರೇಶ್ ಅವರಿಗೆ ನಿಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂಬುದಾಗಿ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗಿರೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರದಲ್ಲಿ ವಿವಿಧ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿನ ಪದವೀಧರರ ಮತದಾರರನ್ನು ಭೇಟಿಯಾಗಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾದ ಕೆ.ಎಂ.ಸುರೇಶ್ ಅವರಿಗೆ ನಿಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಉತ್ತಮ ನಾಯಕನನ್ನು ನೀವು ಆಯ್ಕೆ ಮಾಡಿಕೊಳ್ಳುವಂತೆ ಮತಯಾಚನೆ ಮಾಡಿ ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗಿರೀಶ್ ,ಎಂ.ಎಸ್.ರಾಘವೇಂದ್ರ, ಕೇಶವಮೂರ್ತಿ, ಹರ್ಷ, ಎಚ್.ಆರ್.ಯೋಗೇಶ್, ಮಂಜುನಾಥ್, ವೆಂಕಟೇಶ್, ಮಂಜುಳಾ, ವೇದಮೂರ್ತಿ, ಪಾರ್ಥಯಾದವ್, ನಾಗೇಂದ್ರ, ಸಂತೋಷ, ತಿಪ್ಪೇಸ್ವಾಮಿ, ಶಶಿಕುಮಾರ್ ಇತರರು ಉಪಸ್ಥಿತರಿದ್ದರು.
