
ಹಿರಿಯೂರು:
ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೇ ಉದ್ಯೋಗಗಳು ಸುಲಭವಾಗಿ ಸಿಗಲು ಸಾಧ್ಯವಿಲ್ಲ. ಸತತ ಅಧ್ಯಯನ ಸತತ ಪ್ರಯತ್ನ ಇದ್ದಾಗ ಮಾತ್ರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಾಗಿ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಡಿ.ಧರಣೇಂದ್ರಯ್ಯ ಹೇಳಿದರು.
ನಗರದ ವಾಣಿ ಸಕ್ಕರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಐಕ್ಯೂ ಎಸಿ ಘಟಕ ಪದವಿ ನಂತರ ಮಂದೇನು ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ಜನಸಂಖ್ಯೆಯಲ್ಲಿ ಭಾರತವು ಎರಡನೇ ಸ್ಥಾನವನ್ನು ಹೊಂದಿ ಮೊದಲನೇ ಸ್ಥಾನದತ್ತ ಮುನ್ನುಗ್ಗುತ್ತ ಇದೆ, ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಹಿರಿಯರ ಸಂಖ್ಯೆ ಹೆಚ್ಚಾಗಿ ಯುವಜನರ ಸಂಖ್ಯೆ ಕಡಿಮೆಇದೆ, ಆದರೆ ಭಾರತ ದೇಶ ಅತಿ ಹೆಚ್ಚು ಯುವ ಸಮುದಾಯವನ್ನು ಹೊಂದಿದ್ದು ದೇಶದ ಯುವ ಜನತೆಗೆ ಹೆಚ್ಚು ಹೆಚ್ಚು ಅವಕಾಶಗಳು ದೊರೆಯುತ್ತವೆ
ಆದಕಾರಣ ಯುವ ಸಮುದಾಯವು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಸತತ ಪರಿಶ್ರಮದಿಂದ ಅಧ್ಯಯನ ಮಾಡುವ ಮೂಲಕ ಉತ್ತಮವಾದ ಅಂಕಗಳನ್ನು ಪಡೆದು ಉನ್ನತ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಚಿತ್ರದುರ್ಗದ ಎಸ್. ಜೆ. ಎಂ. ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಲ್. ಈಶ್ವರಪ್ಪ ಮಾತನಾಡಿ, ಸಮಾಜಶಾಸ್ತ್ರವು ಎಲ್ಲಾ ಸಮಾಜ ವಿಜ್ಞಾನಗಳ ತಾಯಿಯಾಗಿದ್ದು, ಇದು ಪ್ರತಿಯೊಬ್ಬರಿಗೂ ಬದುಕು ಕಟ್ಟಿಕೊಳ್ಳಲು ಸ್ಪೂರ್ತಿಯಾಗುತ್ತದೆ ಕೌಟುಂಬಿಕ ಬದುಕಿನ ಸಾಮಾಜಿಕ ಸಂಬಂಧಗಳು ಒಡೆಯದಂತೆ ಕಾಪಾಡುತ್ತದೆ
ಅಲ್ಲದೆ ಬದುಕಿನಲ್ಲಿ ಶಿಸ್ತು ಸಂಯಮ ತಾಳ್ಮೆ ರೀತಿ ನೀತಿ ಉತ್ತಮ ನಡವಳಿಕೆಯನ್ನ ಕಲಿಸುತ್ತದೆ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳು ಇದ್ದು, ಐಎಎಸ್. ಕೆಎಎಸ್. ಬಿ ಎಡ್. ಎಲ್ ಎಲ್ ಬಿ. ಎಂ ಎ. ಎಂ, ಬಿಎ.ಎಂ.ಎಸ್ ಹೀಗೆ ಹಲವಾರು ಸ್ನಾತಕೋತರ ಪದವಿಗಳನ್ನ ಪಡೆದು ಪಿಎಚ್ ಡಿ ಪದವಿಯನ್ನು ಪಡೆಯಲು ಸಹ ಅವಕಾಶವಿದೆ,
ನಂತರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವಿವಿಧ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾಗಿ ಉದ್ಯೋಗ ಪಡೆದುಕೊಳ್ಳುವ ಮೂಲಕ ಕುಟುಂಬವನ್ನು ನಿಭಾಯಿಸುವ ಶಕ್ತಿಯನ್ನು ಪದವಿ ಕೋರ್ಸುಗಳು ನಮಗೆ ನೀಡುತ್ತದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿ ಆರ್.ಹೇಮಲತಾ ವಹಿಸಿದ್ದರು. ಇದೇ ವೇಳೆ ಸಮಾಜಶಾಸ್ತ್ರ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾಗಲಕ್ಷ್ಮಿ, ಸೃಜನ, ಸಂಜನಾಬಾಯಿ, ನಿತಿನ್ ಕುಮಾರ್, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಐಕ್ಯೂ ಏಸಿ. ಸಂಚಾರಕರಾದ ಮಹಮ್ಮದ್ ಸಾದತ್. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಚ್.ಮಹಾಂತೇಶ್. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಎಸ್.ಎಲ್.ಎನ್. ಮೂರ್ತಿ, ಡಾ. ಪಿ. ಚಿತ್ತಯ್ಯ, ಎಸ್. ಜಿ.ರಂಗಸ್ವಾಮಿ ಸಕ್ಕರ, ಕಚೇರಿಯ ಪಿ.ಎನ್. ನರಸಿಂಹಮೂರ್ತಿ, ಕಿರಣ್, ಗಿರೀಶ್ ಗೌಡ, ಅನುಷಾ, ಅಮೃತ ಹಾಗೂ ಇತರರು ಉಪಸ್ಥಿತರಿದ್ದರು.
