October 7, 2026
000004

ಹಿರಿಯೂರು :     

ಜೀವದಾತೆ ಫೌಂಡೇಶನ್ ಮೂಲಕ ಕೆ.ಅಭಿನಂದನ್ ಅವರು ತಮ್ಮ ಪುತ್ರನ ಸ್ಮರಣಾರ್ಥವಾಗಿ ತಾಲೂಕಿನ ಜನರ ಸೇವೆಗಾಗಿ ಉಚಿತವಾಗಿ ಎರಡು ಆಂಬ್ಯುಲೆನ್ಸ್ ನೀಡಿ ಸಮಾಜ ಸೇವೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ರವರು ಹೇಳಿದರು.

ತಾಲೂಕಿನ ವೇಣುಕಲ್ಲುಗುಡ್ಡ ಗ್ರಾಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಅಭಿನಂದನ್ ಹಾಗೂ ಪತ್ನಿ ನೇತ್ರಾವತಿಯವರು ಪುತ್ರ ದಿವಂಗತ ಎ.ವೈಷ್ಣವ್ ಅವರ ಜನ್ಮದಿನ ಹಾಗೂ ಪುಣ್ಯ ಸ್ಮರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಅಪಘಾತ, ಅನಾರೋಗ್ಯ ಮತ್ತು ಇತರೆ ವೈದ್ಯಕೀಯ ಸಂದರ್ಭಗಳಲ್ಲಿ ಬಡವರಿಗೆ ಈ ಆಂಬ್ಯುಲೆನ್ಸ್ ಉಪಯುಕ್ತವಾಗಲಿದ್ದು, ಶಾಸಕರಾಗಿ ನಾವು ಮಾಡಲಾಗದ ಕೆಲಸವನ್ನು ಅಭಿನಂದನ್ ರವರು ಮಾಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ, ಪುತ್ರನ ನೆನಪಿಗಾಗಿ ಇಷ್ಟೊಂದು ದೊಡ್ಡ ಸೇವೆ ಮಾಡುವುದು ಸುಲಭವಲ್ಲ ಮುಂದೆ ದೇವರು ಇವರಿಗೆ ಉತ್ತಮ ಭವಿಷ್ಯ ಕರುಣಿಸುತ್ತಾನೆ ಎಂಬುದಾಗಿ ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಅಭಿನಂದನ್ ಮಾತನಾಡಿ, ನನ್ನ ಪುತ್ರ ಚಿಕ್ಕವಯಸ್ಸಿನಲ್ಲಿ ಅಪಾರಜ್ಞಾನ ಉಳ್ಳವನಾಗಿದ್ದ, ಆತನ ಹೆಸರನ್ನು ಶಾಶ್ವತವಾಗಿ ಉಳಿಸುವ ಆಸೆ ನಮ್ಮದು, ನಮ್ಮಲ್ಲಿ ಪುತ್ರ ಜೀವಂತವಾಗಿ ಇರಬೇಕೆಂಬ ಉದ್ದೇಶದಿಂದ ವೈಷ್ಣವ್ ಎಂಬ ಹೆಸರಿನಲ್ಲಿ ಆಂಬುಲೆನ್ಸ್ ನೀಡಲು ಮುಂದಾಗಿದ್ದೇನೆ ಎಂದರಲ್ಲದೆ,

ಈಗ ಎರಡು ಆಂಬ್ಯುಲೆನ್ಸ್ ನೀಡಲಾಗಿದೆ ಮುಂದಿನ ದಿನಗಳಲ್ಲಿ ಮತ್ತೆ 8 ಆಂಬ್ಯುಲೆನ್ಸ್ ಸೇರಿದಂತೆ ತಾಲೂಕಿನಲ್ಲಿ ಒಟ್ಟು 10 ವೈಷ್ಣವ್ ಆಂಬ್ಯುಲೆನ್ಸ್ ನೀಡುವ ಉದ್ದೇಶವಿದೆ, ಈ ಸೇವೆ ಹಿರಿಯೂರು ತಾಲೂಕಿಗೆ ಸೀಮಿತವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಅಭಿನಂದನ್ ರವರ ಪತ್ನಿ ನೇತ್ರಾವತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ವಿಧಾನ ಪರಿಷತ್ ಚುನಾವಣೆಯ ಎನ್.ಡಿ.ಎ ಅಭ್ಯರ್ಥಿ ಕೆ.ಸುರೇಶ್, ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್, ಎ.ಮುರಳಿ, ಸಂಪತ್ ಕುಮಾರ್, ವಿಶ್ವನಾಥ್, ಎಂ.ರವೀಂದ್ರಪ್ಪ, ಕೆ.ಮಂಜುನಾಥ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಟಿ.ಚಂದ್ರಶೇಖರ್, ಜೆ.ಬಿ.ರಾಜು, ಹಾಲಪ್ಪ, ಬೀರೇನಹಳ್ಳಿ ಷಡಕ್ಷರಿ, ಶಿವರಂಜಿನಿಯಾದವ್, ನಿತಿನ್ ಗೌಡ, ಮುರುಳಿ, ಯೋಗೇಶ್, ರಂಗಸ್ವಾಮಿ, ಕೆ.ಟಿ.ಹನುಮಂತ, ಮಂಜುಹೆಗ್ಗೆರೆ, ವಿ.ಕೆ.ಗುಡ್ಡ ರಾಕೇಶ್, ಅಭಿಲಾಷ್, ಸೀತಾರಾಮು, ವಾಸು, ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *