
ಹಿರಿಯೂರು :
ಇತ್ತೀಚಿನ ವರ್ಷಗಳಲ್ಲಿ ಜಾತೀಯ ಅಲ್ಪಸಂಖ್ಯಾತರಾದ ಕುಂಬಾರ, ಕುರುಬ, ಸವಿತಾ ಸಮಾಜ, ಮಡಿವಾಳ, ಕೊರಚ, ಕೊರಮ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಸಂಪೂರ್ಣವಾಗಿ ಅಗೌರವ ಹಾಗೂ ನಿರ್ಲಕ್ಷ ಮಾಡುತ್ತಿದ್ದಾರೆ ತಳ ಸಮುದಾಯಗಳ ಕಾರ್ಯಕರ್ತರನ್ನು ಮುಂಚೂಣಿಗೆ ತರುವಲ್ಲಿ ನಿರಾಸಕ್ತಿ, ನಿರ್ಲಕ್ಷ ಮಾಡುತ್ತಿದ್ದು, ಸತತ ಅವಮಾನ ಮಾಡಲಾಗುತ್ತಿದೆ ಎಂಬುದಾಗಿ ಬಿಜೆಪಿ ಜಿಲ್ಲಾ ಒಬಿಸಿ ಕಾರ್ಯದರ್ಶಿ ಕೇಶವಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಒಬಿಸಿ ಕಾರ್ಯದರ್ಶಿ ಹಾಗೂ ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಕೇಶವಮೂರ್ತಿರವರು ಪ್ರಧಾನಿ ನರೇಂದ್ರಮೋದಿರವರ 76ನೇ ಜನ್ಮದಿನೋತ್ಸವದ ಅಂಗವಾಗಿ ನಡೆದ ಹಿರಿಯೂರಿನ ಕಾರ್ಯಕ್ರಮದಲ್ಲಿ ಮೂರು ಬಾರಿ ಹಿರಿಯೂರು ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಬಾರಿ ನಗರಸಭೆ ಸದಸ್ಯರಾಗಿ, ತಾಲೂಕಿನಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಕುಂಬಾರ ಸಮಾಜದ ಅಧ್ಯಕ್ಷನಾಗಿ ಹಾಗೂ ಪ್ರಸ್ತುತ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನನ್ನನ್ನು ಮೋದಿಜಿಯವರ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ವೇದಿಕೆಗೆ ಆಹ್ವಾನಿಸದೆ ರಾಜಕೀಯ ಷಡ್ಯಂತ್ರ ರೂಪಿಸಿದ್ದಾರೆ ಎಂದಿದ್ದಾರಲ್ಲದೆ,
ಹಿಂದುಳಿದ ಸಮಾಜದ ಮೇಲೆ ಹಿರಿಯೂರು ಮಂಡಲ ಬಿಜೆಪಿ ಮಾಡಿರುವುದು ಜಾತಿಯ ಬಹು ಸಂಖ್ಯಾತರು ಹಾಗೂ ಇಡೀ ಹಿರಿಯೂರು ಮಂಡಲ ಬಿಜೆಪಿಯನ್ನು ಓರ್ವ ವ್ಯಕ್ತಿ, ಒಂದು ಜನಾಂಗ ಎಂಬುದು ಸಾಬೀತಾಗಿದೆ ಎಂದಿದ್ದಾರೆ, ಬಿಜೆಪಿ ಅಥವಾ ಎನ್.ಡಿ.ಎ ಅಭ್ಯರ್ಥಿ ಗೆಲ್ಲಲು ಕೇವಲ ಎರಡೇ ಸಮುದಾಯಗಳ ಮತಗಳು ಸಾಕು, ಜಾತಿಯ ಅಲ್ಪಸಂಖ್ಯಾತರ ಮತಬೇಡ ಎಂಬ ಅಹಂಕಾರದಲ್ಲಿರುವ ಪಕ್ಷಕ್ಕೆ ಹಾಗೂ ಅಭ್ಯರ್ಥಿಗೆ ಸಣ್ಣ ಸಣ್ಣ ಸಮುದಾಯಗಳು ಉತ್ತರ ಕೊಡುವ ಕಾಲ ದೂರವಿಲ್ಲ ತಕ್ಷಣ ಪಕ್ಷದ ನಿಲುವಿನಲ್ಲಿ ಬದಲಾಗದಿದ್ದರೆ ಮುಂದಿನ ಆಗು-ಹೋಗುಗಳ ಬಗ್ಗೆ ಆ ಸಮುದಾಯದವರು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ಬಿಜೆಪಿ ಮುಖಂಡ ಕೇಶವಮೂರ್ತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
