October 6, 2026
001

ಹಿರಿಯೂರು :

ನಗರದ ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳಾದ ದಿ||ಶಂಕರ್ ನಾಗ್ ಕಲಾ ವೇದಿಕೆ (ರಿ.), ಅಮೃತ ಮಹಿಳಾ ಸ್ವಸಹಾಯ ಸಂಘ (ರಿ) ಹಾಗೂ ಕರ್ನಾಟಕ ರಾಜ್ಯ ಗುರು ಶಂಕರ್ ನಾಗ್ ಮಿಮಿಕ್ರಿ ಹಾಸ್ಯ ಸಾಹಿತ್ಯ ಗಾಯನ ಜಾನಪದ ವಿವಿಧ ಕಲಾವಿದರ ಸಾಂಸ್ಕೃತಿಕ ಕಲಾ ವೃಂದದ ಸಂಯುಕ್ತಾಶ್ರಯದಲ್ಲಿ ಮುಂಬರುವ ನವೆಂಬರ್ 9, 2026 ರಂದು ಬೃಹತ್ ಸಾಂಸ್ಕೃತಿಕ ಹಬ್ಬ ಹಾಗೂ ಅಭಿಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಶಂಕರ್ ನಾಗ್ ಕಲಾ ವೇದಿಕೆ ಅಧ್ಯಕ್ಷರಾದ ದಿವುಶಂಕರ್ ತಿಳಿಸಿದ್ದಾರೆ.

ಈ ಅಭೂತಪೂರ್ವ ಸಮಾರಂಭದಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ, ಕನ್ನಡದ ಹೆಮ್ಮೆಯ ನಟ, ನಿರ್ದೇಶಕ, ಆಟೋ ರಾಜ ಶಂಕರ್ ನಾಗ್ ರವರ 72ನೇ ವರ್ಷದ ಜನ್ಮದಿನೋತ್ಸವ ಹಾಗೂ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಬುದ್ಧಿಜೀವಿ ನಟ ಶ್ರೀ ಅನಂತ್ ನಾಗ್ ಅವರ ಅಭಿಮಾನೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಪಾಂಡಿಚೇರಿ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಹಾಗೂ ಕಲೆ, ಸಾಹಿತ್ಯ, ಸಮಾಜ ಸೇವೆ ಮತ್ತು ಕನ್ನಡ ನಾಡು-ನುಡಿಯ ರಕ್ಷಣೆಯಲ್ಲಿ ಸುದೀರ್ಘ 40 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಡಾ. ಹೆಚ್.ಸಿ. ದಿವುಶಂಕರ್ (ಜೂನಿಯರ್ ಶಂಕರ್ ನಾಗ್) ಅವರಿಗೂ ಸಹ ವಿಶೇಷ ಅಭಿಮಾನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ (ಕಲೆ, ಸಾಹಿತ್ಯ, ಜಾನಪದ, ಸಮಾಜ ಸೇವೆ ಇತ್ಯಾದಿ) ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯಮಟ್ಟದ ‘ಕನ್ನಡ ಕಲಾ ಸಿಂಧೂರ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ಅರ್ಹ ಹಾಗೂ ಆಸಕ್ತ ಸಾಧಕರು ತಮ್ಮ ಸಾಧನಾ ಮನವಿಯೊಂದಿಗೆ ಇದೇ ಅಕ್ಟೋಬರ್ 25ರ ಒಳಗಾಗಿ ಡಾ.ಹೆಚ್.ಸಿ.ದಿವುಶಂಕರ್ ಜೂನಿಯರ್ ಶಂಕರ್ ಸಂಸ್ಥಾಪಕ ಅಧ್ಯಕ್ಷರು. ದಿ//ಶಂಕರ್ ನಾಗ್ ಅಭಿಮಾನಿಗಳ ಕಲಾವೇದಿಕೆ (ರಿ) ತಿರುವಳ್ಳುವರ್ ರಸ್ತೆ  ಎಸ್.ವಿ.ಆರ್. ಬಿಲ್ಡಿಂಗ್ ಹಿರಿಯೂರು ಚಿತ್ರದುರ್ಗ ಜಿಲ್ಲೆ.ಮೊ‌9972373897ಈ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

About The Author

Leave a Reply

Your email address will not be published. Required fields are marked *