
ಹಿರಿಯೂರು:
ತಾಲೂಕಿನ ಜೆಜೆಹಳ್ಳಿ ಹೋಬಳಿ ಆನೇಸಿದ್ರಿ ಗ್ರಾಮದ ಹಿರಿಯ ಮುಖಂಡರು, ಮುತ್ಸದ್ದಿ, ಸರಳ ಸಜ್ಜನಿಕೆ ವ್ಯಕ್ತಿತ್ವದ ದಿವಂಗತ.ಸಾ.ರಂಗಯ್ಯ ಅವರ ಮಗನಾದ ಡಾ.ರಂಗನಾಥ್ ರವರು ಉಪನಿರ್ದೇಶಕರು. ಯುನಿವರ್ಸಲ್ ಹೆಲ್ತ್ ಕವರೇಜ್ ಹಾಗು ಆಯುಷ್ಮಾನ್ ಭಾರತ್ ಕಾರ್ಯಾಲಯ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ, ಆರೋಗ್ಯಸೌಧ. ಬೆಂಗಳೂರು ಇಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಇವರನ್ನು ಗುರುತಿಸಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 2026 ರ “ಹೆಲ್ತ್ ಕೇರ್ ಎಕ್ಸಲೆನ್ಸ್ ಅವಾರ್ಡ” ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಯು.ಟಿ.ಖಾದರ್ ಅವರು ಡಾ.ರಂಗನಾಥ್ ಅವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ. ಡಾ.ಅಶ್ವಥನಾರಾಯಣ,ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರು, ಮಲ್ಲೇಶ್ವರಂ, ಬೆಂಗಳೂರು ಡಾಲೀ ಧನಂಜಯ,ಖ್ಯಾತ ಚಲನಚಿತ್ರ ನಟರು, ಡಾ.ಸಿ.ಆರ್. ಚಂದ್ರಶೇಖರ್, ನಿವ್ರುತ್ತ ಉಪಾದೀಕ್ಷಕರು, ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು, ಶ್ರೀಯುತ ರವಿಹೆಗಡೆ, ಸಂಪಾದಕ ನಿರ್ದೇಶಕರು, ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು ಹಾಗು ಇನ್ನೂ ಅನೇಕ ಗಣ್ಯರು ಇದ್ದರು. ಪ್ರಶಸ್ತಿ ಸ್ಪೀಕಾರ ಮಾಡಿರುವ ಡಾ. ರಂಗನಾಥ್ ಅವರಿಗೆ ಕೆಪಿಸಿಸಿ ಒಬಿಸಿ ರಾಜ್ಯ ಕಾರ್ಯದರ್ಶಿಗಳಾದ ಮಾಯಸಂದ್ರ ರಂಗಪ್ಪ ಯಾದವ್, ಹಾಗೂ ವಕೀಲರಾದ ಮ್ಯಾಕ್ಲೂರಹಳ್ಳಿಯ ಎಂ.ಡಿ.ನಾಗಣ್ಣರವರು ಉಪಸ್ಥಿತರಿದ್ದು, ಡಾ.ರಂಗನಾಥ್ ಅವರಿಗೆ ಅಭಿನಂದಿಸಿದ್ದಾರೆ.
