July 30, 2026
0000004

ಹಿರಿಯೂರು :

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ಹಿರಿಯೂರು ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 8ರಲ್ಲಿ ಮತಗಟ್ಟೆ ಸಂಖ್ಯೆ 165, 166, 167 ಮತ್ತು 168 ರ ವ್ಯಾಪ್ತಿಯಲ್ಲಿ ಬರುವ ಮತದಾರರ ಪಟ್ಟಿಗಳಲ್ಲಿನ ನಗರಸಭೆ ಪೌರಾಯುಕ್ತರಾದ ಎ.ವಾಸೀಂರವರು ಅಧ್ಯಕ್ಷತೆಯಲ್ಲಿ ಪತ್ತೆ ಹಚ್ಚಲಾಗದ ಮತದಾರರನ್ನು ಪತ್ತೆ ಹಚ್ಚುವ ಕೆಲಸವನ್ನು  ಮಾಡಲಾಯಿತು.

ಮತಗಟ್ಟೆಗಳ ಮಟ್ಟದ ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಾಜಕೀಯ ಮುಖಂಡರ ಹಾಗೂ ಸಾರ್ವಜನಿಕರ ಸಭೆಯನ್ನು ಕರೆದು ಮತದಾರರು ಪಟ್ಟಿಗಳನ್ನು ಮತ್ತು ಎನ್ಯೂಮರೇಷನ್ ಫಾರಂ ಗಳನ್ನು ಪರಿಶೀಲಿಸಿ ಪತ್ತೆಯಾಗದ ಮತದಾರರನ್ನು ಪತ್ತೆ ಮಾಡುವ ಕಾರ್ಯ ನಡೆಸಲಾಯಿತು.

ನಂತರ ಪೌರಾಯುಕ್ತರಾದ ಎ. ವಾಸಿಂ ರವರು ವಿಶೇಷ ಸಮಗ್ರ ಪರಿಷ್ಕರಣೆ ಉದ್ದೇಶಿಸಿ ಮಾತನಾಡಿ, ಹಾಜರಿದ್ದ ಎಲ್ಲರಿಗೂ ಸಂಪೂರ್ಣ ಮಾಹಿತಿಯೊಂದಿಗೆ  ಸಲಹೆ ಸೂಚನೆಗಳನ್ನು ನೀಡಿದರು. ನಂತರ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರಾದ ಜುನೇದ್ ಸಿರಾಜ್. ಎಸ್ ರವರು ಮಾತನಾಡಿ ಎನ್ಯೂಮರೇಷನ್ ಫಾರಂಗಳನ್ನು ಭರ್ತಿ ಮಾಡುವಾಗ ಆಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಹಾಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಯಿಂದ ನೋಟಿಸ್ ಬಂದಲ್ಲಿ ಸಲ್ಲಿಸಬೇಕಾದಂತಹ ದಾಖಲಾತಿಗಳ ಬಗ್ಗೆ ಉಪಸ್ಥಿತರಿದ್ದ ಎಲ್ಲರಿಗೂ ಮಾಹಿತಿಯನ್ನು ನೀಡಿದರು.

ನಂತರ ಶ್ರೀಪಿ.ಎಸ್.ಸಾದತ್ ಉಲ್ಲಾರವರು ಮಾತನಾಡಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಜನರಲ್ಲಿರುವ ಆತಂಕಗಳನ್ನು ಹೋಗಲಾಡಿಸಿ ಸೂಕ್ತ ಹಾಗೂ ಸರಿಯಾದ ಮಾಹಿತಿಗಳನ್ನು ನೀಡಲಾಯಿತು ಹಾಗೂ ಈಗಾಗಲೇ ವಿಶೇಷ ಸಮಗ್ರ ಪರಿಷ್ಕರಣೆ ಯಲ್ಲಿ ಶೇಕಡ 100ಕ್ಕೂ ಹೆಚ್ಚು ಪ್ರಗತಿ ಸಾಧಿಸಿ ಪರಿಷ್ಕರಣೆಯನ್ನು ಮುಕ್ತಾಯಗೊಳಿಸಿರುವ ಮತಗಟ್ಟೆ ಸಂಖ್ಯೆ 165 ರ ಮತಗಟ್ಟೆ ಮಟ್ಟದ ಅಧಿಕಾರಿ ಶ್ರೀಮತಿ ಟಿ.ಚಂದ್ರಕಲಾ ಹಾಗೂ 166 ರ ಮತಗಟ್ಟೆ ಮಟ್ಟದ ಅಧಿಕಾರಿ ಶ್ರೀಮತಿ ಪಿ.ಕೆ.ನವೀನ ರವರಿಗೆ ಹೃದಯಪೂರ್ವಕ  ಅಭಿನಂದನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರುಗಳಾದ ಹೆಚ್.ಅಬ್ದುಲ್, ನಬಿ, ಎ.ಭಾಷಾ, ಸೂರ್ಯೋದಯ ಅಜೀಜ್, ಆಜಾದ್, ದಾದು, ಎಲ್.ಮೊಹಮ್ಮದ್, ದಸ್ತಗೀರ್, ಸೈಫುಲ್ಲಾ, ಡಿಶ್ ಸಮೀರ್, ತಿಪ್ಪೇಸ್ವಾಮಿ ರಾಧಾ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *