
ಹಿರಿಯೂರು :
ತಾಲ್ಲೂಕಿನ ಕಾತ್ರಿಕೇನಹಳ್ಳಿ ಗ್ರಾಮದ ಗಡಿಭಾಗದ ಅರಣ್ಯಕ್ಕೆ ಹೊಂದಿಕೊಂಡಿರುವ ಇಪ್ಪೆಕಣಿವೆ ಭೂತಪ್ಪಸ್ವಾಮಿಗೆ ಗ್ರಾಮಸ್ಥರು ಹಾಗೂ ಯುವಕರೆಲ್ಲರೂ ಸೇರಿ ಸ್ವಾಮಿಗೆ ಮಳೆಯನ್ನು ತರಲೆಂದು ಪೂಜೆ ಸಲ್ಲಿಸುವ ಮುಖಾಂತರ ಅನ್ನ ಸಂತರ್ಪಣೆ ನೆರವೇರಿಸಲಾಗುತ್ತಿದೆ ಎಂಬುದಾಗಿ ಗ್ರಾಮದ ರೈತ ಮುಖಂಡರಾದ ಮಂಜುನಾಥ ಕಾತ್ರಿಕೇನಹಳ್ಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವರ್ಷದ ಮಳೆಗಾಲ ಪ್ರಾರಂಭವಾದಾಗಿನಿಂದಲೂ ಕಾಲಕ್ಕೆ ಸರಿಯಾಗಿ ಮಳೆಯಾಗದೇ ಅಂತರ್ಜಲ ಬತ್ತಿ ಹೋಗುತ್ತಿದೆ. ಇರುವ ಅಲ್ಪ ಸ್ವಲ್ಪ ಬೆಳೆಗಳನ್ನಾದರೂ ಉಳಿಸಿಕೊಳ್ಳಬೇಕಾದರೆ ಮಳೆಯನ್ನು ಕರುಣಿಸಿ ಜನಜಾನುವಾರುಗಳ ಜೀವ ಉಳಿಸುವಂತೆ ಪ್ರಾರ್ಥಿಸಿ ಸ್ವಾಮಿಗೆ ಹರಕೆ ಸಲ್ಲಿಸಿದರು.

ಈ ಪೂಜಾ ಕಾರ್ಯಕ್ರಮಕ್ಕೆ ಪಕ್ಕದ ಗ್ರಾಮಗಳಾದ ಪರಮೇನಹಳ್ಳಿ, ಕತ್ತೆಹೊಳೆ, ಗ್ರಾಮಸ್ಥರು ಹಾಗೂ ಸಿದ್ದೇಶ್, ಪುಟ್ಟರಾಜು, ನಿಜಲಿಂಗಪ್ಪ, ಪ್ರಕಾಶ್ ,ರಂಗನಾಥ್ ಸುದರ್ಶನ್, ಶರತ್ ಗೌಡ, ಅರುಣ್, ಕಾಂತರಾಜು, ಸಿದ್ದೇಗೌಡ, ಪ್ರೇಮಲಿಂಗ, ಶಶಿಕುಮಾರ್, ಮಂಜುನಾಥ್, ಭರತ್, ನವೀನ್, ಮುಂತಾದ ಯುವಕರು ಭಾಗವಹಿಸಿದ್ದರು
