July 30, 2026
000001

ಹಿರಿಯೂರು :              

ತಾಲ್ಲೂಕಿನ ಕಾತ್ರಿಕೇನಹಳ್ಳಿ ಗ್ರಾಮದ ಗಡಿಭಾಗದ ಅರಣ್ಯಕ್ಕೆ ಹೊಂದಿಕೊಂಡಿರುವ ಇಪ್ಪೆಕಣಿವೆ ಭೂತಪ್ಪಸ್ವಾಮಿಗೆ ಗ್ರಾಮಸ್ಥರು ಹಾಗೂ ಯುವಕರೆಲ್ಲರೂ ಸೇರಿ ಸ್ವಾಮಿಗೆ ಮಳೆಯನ್ನು ತರಲೆಂದು ಪೂಜೆ ಸಲ್ಲಿಸುವ ಮುಖಾಂತರ ಅನ್ನ ಸಂತರ್ಪಣೆ ನೆರವೇರಿಸಲಾಗುತ್ತಿದೆ ಎಂಬುದಾಗಿ ಗ್ರಾಮದ ರೈತ ಮುಖಂಡರಾದ ಮಂಜುನಾಥ ಕಾತ್ರಿಕೇನಹಳ್ಳಿ  ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವರ್ಷದ ಮಳೆಗಾಲ ಪ್ರಾರಂಭವಾದಾಗಿನಿಂದಲೂ ಕಾಲಕ್ಕೆ ಸರಿಯಾಗಿ ಮಳೆಯಾಗದೇ ಅಂತರ್ಜಲ ಬತ್ತಿ ಹೋಗುತ್ತಿದೆ. ಇರುವ ಅಲ್ಪ ಸ್ವಲ್ಪ ಬೆಳೆಗಳನ್ನಾದರೂ ಉಳಿಸಿಕೊಳ್ಳಬೇಕಾದರೆ ಮಳೆಯನ್ನು ಕರುಣಿಸಿ ಜನಜಾನುವಾರುಗಳ ಜೀವ ಉಳಿಸುವಂತೆ ಪ್ರಾರ್ಥಿಸಿ ಸ್ವಾಮಿಗೆ ಹರಕೆ ಸಲ್ಲಿಸಿದರು.

ಈ ಪೂಜಾ ಕಾರ್ಯಕ್ರಮಕ್ಕೆ ಪಕ್ಕದ ಗ್ರಾಮಗಳಾದ ಪರಮೇನಹಳ್ಳಿ, ಕತ್ತೆಹೊಳೆ, ಗ್ರಾಮಸ್ಥರು ಹಾಗೂ ಸಿದ್ದೇಶ್, ಪುಟ್ಟರಾಜು, ನಿಜಲಿಂಗಪ್ಪ, ಪ್ರಕಾಶ್ ,ರಂಗನಾಥ್ ಸುದರ್ಶನ್, ಶರತ್ ಗೌಡ, ಅರುಣ್, ಕಾಂತರಾಜು, ಸಿದ್ದೇಗೌಡ, ಪ್ರೇಮಲಿಂಗ, ಶಶಿಕುಮಾರ್, ಮಂಜುನಾಥ್, ಭರತ್, ನವೀನ್, ಮುಂತಾದ ಯುವಕರು ಭಾಗವಹಿಸಿದ್ದರು

About The Author

Leave a Reply

Your email address will not be published. Required fields are marked *