July 29, 2026
0000002

ಹಿರಿಯೂರು :

ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಸರ್ಕಾರಿ ಶಾಲೆಗಳು ಮತ್ತು ಅಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ ಗ್ರೀನ್ ಬೋರ್ಡ್ ಹಾಗೂ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ವತಿಯಿಂದ ತಾಲ್ಲೂಕಿನ ಆಯ್ದ ಸರ್ಕಾರಿ ಶಾಲೆಗಳು ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ  25 ಗ್ರೀನ್ ಬೋರ್ಡ್ ಗಳು ಮತ್ತು 7500 ನೋಟ್ ಪುಸ್ತಕಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು.

ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರರಾಜ್ ಮಾತನಾಡಿ, ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಗ್ರೀನ್ ಬೀರ್ಡ್ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಕೊಡಲಾಗುತ್ತಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರು ವಸಂತ್ ಕುಮಾರ್ ಕಾರ್ಯದರ್ಶಿ ಚಂದ್ರಹಾಸ್ ಎಂಎಸ್ ರಾಘವೇಂದ್ರ ಎಸ್ ಎಲ್ ಎನ್ ಎಸ್ ವೆಂಕಟೇಶ ಭೀಮಣ್ಣ ಜೋಗಪ್ಪ ಧರಣೇಂದ್ರಯ್ಯ ರಂಗನಾಥಪ್ಪ ನಾಗಣ್ಣ ಮಹಾಬಲೇಶ್ವರ ಆನಂದ್ ಶೆಟ್ರು, ಚಂದ್ರಕೀರ್ತಿ ಗುಜ್ಜಾರ್, ನೋಟ್ ಪುಸ್ತಕದ ದಾನಿಗಳಾದ ಮೇಜರ್ ಡೋನರ್ ರೂಪೇಶ್, ಸುರೇಶ್, ಪ್ರೇಕ್ಷ, ಮತ್ತು ವಿಶೇಷ ದಾನಿಗಳಾದ ಕೆ.ಸಿ.ಪ್ರವೀಣ್, ಕನಕ ಟ್ರೇಡರ್ಸ್ ಹಿರಿಯೂರು ಮತ್ತು ಹಲವಾರು ಸೀನಿಯರ್ ರೋಟೆರಿಯನ್ಸ್ ಮತ್ತು ಜೂನಿಯರ್ ರೆಟೋರಿಯಸ್ ಗಳು, ಹಿರಿಯ ಕಿರಿಯ ರೋಟರಿ ಕ್ಲಬ್ ನ ಸದಸ್ಯರು ಹಾಗೂ ಇನ್ಹರ್ ವ್ಹೀಲ್ ಸದಸ್ಯರು, ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *