
ಹಿರಿಯೂರು :
ಮುಂಬರುವ ಹಿರಿಯೂರು ಉಪಚುನಾವಣೆಯ ಅಭ್ಯರ್ಥಿಯನ್ನಾಗಿ ಸಾಮಾಜಿಕ ಹೋರಾಟಗಾರರು, ಪಕ್ಷದ ಜಿಲ್ಲಾ ಸಂಯೋಜಕರಾದ ಕೆ.ಪಿ.ಶ್ರೀನಿವಾಸ್ ರವರನ್ನು ಕಣಕ್ಕಿಳಿಸುವ ಮೂಲಕ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುವ ಮೂಲಕ ಅವರ ಗೆಲುವಿಗೆ ಸಹಕರಿಸಬೇಕು ಎಂಬುದಾಗಿ ಮನವಿ ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕು ಯುವಘಟಕದ ಅಧ್ಯಕ್ಷರನ್ನಾಗಿ ದೊರೇಶ್ ಈಶ್ವರಗೆರೆ, ನಗರ ಘಟಕದ ಅಧ್ಯಕ್ಷರನ್ನಾಗಿ ರಾಘವೇಂದ್ರ ಹಿರಿಯೂರು, ಹಾಗೂ ಕಾರ್ಯದರ್ಶಿಗಳನ್ನಾಗಿ ಮಂಜುದಿಂಡಾವರ, ರಂಗಸ್ವಾಮಿಕಳವಿಬಾಗಿರವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಲಕ್ಷ್ಮಮ್ಮ, ನವೀದ್, ಭೀಮನಕೆರೆಶಿವಮೂರ್ತಿ, ಜಿಲ್ಲಾ ಸಂಯೋಜಕರಾದ ಕೆ.ಪಿ.ಶ್ರೀನಿವಾಸ್, ಜಿಲ್ಲಾ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಮಹಾಲಿಂಗಪ್ಪ ಉಪ್ಪಳಗೆರೆ, ಜಿಲ್ಲಾ ಖಜಾಂಚಿ ಶ್ರೀನಿವಾಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಸಹನಾ, ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾದ ಮೀರಾ, ಹಿರಿಯೂರು ತಾಲ್ಲೂಕು ಉಸ್ತುವಾರಿ ರಾಘವೇಂದ್ರ ಈಶ್ವರಗೆರೆ, ಅಧ್ಯಕ್ಷರಾದ ಎಂ.ಜಗದೀಶ್, ಉಪಾಧ್ಯಕ್ಷರಾದ ಚಂದ್ರಣ್ಣ, ಖಜಾಂಚಿ ರಂಗಸ್ವಾಮಿಹುಚ್ಚವ್ವನಹಳ್ಳಿ, ಕಾರ್ಯದರ್ಶಿಗಳಾದ ಕದುರಪ್ಪ, ಶಿಡ್ಲಯನಕೋಟೆ, ಮಹೇಶ್ ಕಾಟನಾಯಕನಹಳ್ಳಿ, ಶಿವುಖಂಡೇನಹಳ್ಳಿ, ಯೋಗೇಶ್ ಖಂಡೇನಹಳ್ಳಿ (ಮಾಜಿ ಸೈನಿಕರು) ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
