
ಹಿರಿಯೂರು :
ನಗರದ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದ ಹಿತೈಷಿಗಳೂ ದಾನಿಗಳು ಹಾಗೂ ಶ್ರೀಮುರುಳಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಶ್ರೀಮುರುಳಿ ರವರ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ಹಿರಿಯರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿಸಿದ್ದಾರೆ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.
ಶ್ರೀಆಶ್ರಮಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಸರಳವಾಗಿ ಹುಟ್ಟುಹಬ್ಬವನ್ನು ಹಿರಿಯರ ಜೊತೆಗೆ ಆಚರಿಸಿಕೊಂಡು ಆಶ್ರಮದ ನಿವಾಸಿಗಳಿಗೆ ಅನ್ನದಾನ ಮಾಡಿರುವ ಶ್ರೀಯುತರ ಸೇವಾಮನೋಭಾವಕ್ಕೆ ಶ್ರೀ ಆಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತಾ, ಆಶ್ರಮದ ನಿವಾಸಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
