
ಹಿರಿಯೂರು :
ಸಮಾಜದ ಜಾತಿಧರ್ಮದ ಎಲ್ಲೆ ಮೀರಿ ಬೆಳೆದ ಸರಳ ಸಜ್ಜನಿಕೆ ಸಹೃದಯ ವ್ಯಕ್ತಿತ್ವದ ಸಚಿವರಾದ ಡಿ.ಸುಧಾಕರ್ ರವರು ಕಷ್ಟ ಎಂದು ಬಂದವರಿಗೆ ಸದಾ ಸಹಾಯಹಸ್ತ ನೀಡುತ್ತಿದ್ದ ಧೀಮಂತನಾಯಕ, ಇವರ ಸಾವಿನ ನಂತರ ನಗರದ ಆಟೋ ಚಾಲಕರು ತಮ್ಮ ಆಟೋಗಳ ಮೇಲೆ ಸಚಿವರಾದ ದಿವಂಗತ ಡಿ.ಸುಧಾಕರ್ ರವರ ಭಾವ ಚಿತ್ರಗಳನ್ನು ಹಾಕಿಕೊಂಡಿದ್ದು, ಮತ್ತೆ ಹುಟ್ಟಿಬನ್ನಿ ಎಂಬುದಾಗಿ ಬರೆಸಿಕೊಂಡಿದ್ದಾರೆ.
ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವ ಯಾವುದೇ ನಾಯಕರಾದರೂ ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ, ಎಂಬುದನ್ನು ಸಚಿವರಾದ ಡಿ.ಸುಧಾಕರ್ ಒಳ್ಳೆಯ ಉದಾಹರಣೆಯಾಗಿದ್ದಾರೆ, ಡಿ.ಸುಧಾಕರ್ ರವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಬಂದ ಪ್ರತಿಯೊಬ್ಬರೂ ಅವರ ಅನಿರೀಕ್ಷಿತ ಸಾವಿಗೆ ಕಂಬನಿ ಮಿಡಿದಿದ್ದಾರೆ.
