
ಹಿರಿಯೂರು:
ಕರ್ನಾಟಕ ಸರ್ಕಾರದ ಹಾಲಿ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಿ.ಸುಧಾಕರ್ ರವರ ನಿಧನದಿಂದ ರಾಜಕೀಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಿ.ಸುಧಾಕರ್ ರವರು ತಾಲೂಕಿನ ಬಡವರಿಗೆ ತಳಸಮುದಾಯದವರಿಗೆ ಹಾಗೂ ಯಾರೇ ಕಷ್ಟ ಅಂತ ಬಂದರೂ ಆರ್ಥಿಕ ಸಹಾಯ ಮಾಡುತ್ತಿದ್ದರು. ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಪದವಿ ವಿದ್ಯಾರ್ಥಿಗಳಲ್ಲಿ ಯಾರು ಅತಿ ಹೆಚ್ಚು ಅಂಕ ಪಡೆಯುತ್ತಾರೋ ಅವರಿಗೆ ಪ್ರೋತ್ಸಾಹ ಧನ ನೀಡುತ್ತಾ ಪ್ರೋತ್ಸಾಹಿಸುತ್ತಿದ್ದರು.
ಮದುವೆ ಮುಂಜಿ ನಾಮಕರಣ ಜಾತ್ರೆ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ, ದೇವಸ್ಥಾನಗಳಿಗೆ ಹಣ ಸಹಾಯ ಹಾಗೂ ಅನ್ನದಾಸೋಹ ಮಾಡುತ್ತಿದ್ದರು. ನಾಡಿನಲ್ಲಿ ಜಾತ್ಯತೀತ, ಧರ್ಮಾತೀತ ವ್ಯಕ್ತಿಯಾಗಿ ಪ್ರಸಿದ್ಧರಾಗಿದ್ದರು, ಅವರ ಜನಪರ ಕಾರ್ಯಗಳು ಜಿಲ್ಲೆಯ ಜನರ ಪ್ರೀತಿಯನ್ನು ಪಡೆಯುವಂತೆ ಮಾಡಿದೆ ಎಂಬುದಾಗಿ ಶ್ಲಾಘಿಸಿದರು.
ಸಚಿವ ಡಿ.ಸುಧಾಕರ್ ರವರ ನಿಧನಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ಜೆ.ನಿಜಲಿಂಗಪ್ಪ, ಮಹಮದ್ ಫಕ್ರುದ್ದೀನ್, ಹರ್ತಿಕೋಟಿಮಹಾಸ್ವಾಮಿ, ಎಂ.ರಮೇಶ್ ನಾಯಕ್, ಜಿ.ಹನುಮಂತರೆಡ್ಡಿ, ಕೆ.ಆರ್.ಉಮಾದೇವಿ ಯಮುನ, .ಟಿ.ಭಾನುಮತಿ, ಹೆಚ್.ಶಿವಮೂರ್ತಿ, ಎಂ.ಬಿ.ಲಿಂಗಪ್ಪ, ಮಂಗಳಗೌರಮ್ಮ. ಬಿ.ಟಿ.ಶಂಕರಲಿಂಗಯ್ಯ, ಗಡಾರಿ ಕೃಷ್ಣಪ್ಪ, ಗಾಯಿತ್ರಿ ದೇವಿ, ಆರ್. ಮಂಜುನಾಥ್, ಸ್ವಪ್ನ, ರಂಗನಾಥ್. ಇವರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
