May 2, 2026
01

ಮಧ್ಯಪ್ರದೇಶ :

ಮಧ್ಯಪ್ರದೇಶದ ಜಬಲ್ಪುರ ಬಾರ್ಗಿ ಅಣೆಕಟ್ಟೆಯಲ್ಲಿ ದುರಂತಕ್ಕೀಡಾದ ಪ್ರವಾಸಿ ಬೋಟ್ ನಲ್ಲಿದ್ದ 9 ಜನರು ಸಾವನಪ್ಪಿದ್ದಾರೆ, ಈ ಸಾವುಗಳು ಜನರ ಮನಸ್ಸಿನ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ, ಆದರೆ ಅಪಘಾತಕ್ಕೀಡಾದ ಕ್ರೂಸ್ ದೋಣಿಯಲ್ಲಿ ಸಿಕ್ಕ ಅಮ್ಮ ಮಗುವಿನ ಶವ ಇಡೀ ದೇಶವನ್ನು ಕಣ್ಣೀರು ಹಾಕುವಂತೆ ಮಾಡಿದೆ.

ಅಪಘಾತಕೀಡಾದ ಕ್ರೂಸ್ ದೋಣಿಯಲ್ಲಿದ್ದ ಮಹಿಳೆ ಶವವನ್ನು ಅರೆಸೈನಿಕ ಪಡೆಯ ಡೈವಿಂಗ್ ತಂಡ ಪತ್ತೆ ಮಾಡಿದೆ,  ಆದರೆ ವಿಷಯ ಅದಲ್ಲ, ಆ ಮಹಿಳೆ ಸಾವಿನಲ್ಲೂ ತನ್ನ ಮೂರು ವರ್ಷದ ಮಗುವನ್ನ ಬಿಗಿದಪ್ಪಿ ಮಲಗಿದ್ದಳು, ಆ ಕಂದ ಕೂಡ ಅಮ್ಮನನ್ನು ತಬ್ಬಿ ಹಿಡಿದಿದ್ದ ದೃಶ್ಯ ನೋಡಿದವರಿಗೆ ಅಮ್ಮ ಮಗು ನಿದ್ರೆಯಲ್ಲಿದ್ದಾರೆ ಎನ್ನುವಂತೆ ಬಾಸವಾಗುತ್ತಿತ್ತು.

ಆದರೆ ಆ ಅಮ್ಮ-ಮಗು ಇಬ್ಬರೂ ಚಿರನಿದ್ರೆಯಲ್ಲಿದ್ದರು. ಸಾವಿನಲ್ಲೂ ಸಹ ಅಮ್ಮನ ಅಪ್ಪುಗೆ ಕಂದಮ್ಮನಿಗೆ ಆಧಾರವಾಗಿತ್ತು, ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಮೂರು ವರ್ಷ ತನ್ನ ಕೈಯಲ್ಲಿಡಿದು ಸಾಕಿದ್ದ ಆ ತಾಯಿ ಸಾವಿನಲ್ಲೂ ಸಹ  ಆಕೆ ತನ್ನ ಕಂದನನ್ನು ಎದೆಗೌಚಿಕೊಂಡೆ ಸಾವನ್ನಪ್ಪಿರುವುದು ಈ ದೇಶದ ಜನರ ಮನಕಲುಕುವ ದೃಶ್ಯವಾಗಿದೆ.

About The Author

Leave a Reply

Your email address will not be published. Required fields are marked *