May 1, 2026
007

ಹಿರಿಯೂರು :    

ಶ್ರೀಶುಭೋದಯ ವೃದ್ಧಾಶ್ರಮದ ವಯೋವೃದ್ಧರು ಬಿಸಿಲಿನ ತಾಪ ತಾಳಲಾರದೇ ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡು ಆಶ್ರಮದಲ್ಲಿ ಅವರು ತಂಪಾಗಿರಲೆಂಬ ಉದ್ದೇಶದಿಂದ ಆಲೂರು ಗ್ರಾಮದ ಪ್ರಗತಿಪರ ರೈತರಾದ ಶ್ರೀ ಕೌಶಿಕ್ ನಾಯ್ಡುರವರು ಶ್ರೀ ಆಶ್ರಮಕ್ಕೆ 45 ಲೀಟರ್ ನಾ ಕೂಲರ್ ಅನ್ನು ಕೊಡುಗೆಯಾಗಿ ನೀಡಿದ್ದು, ಇದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.

ತಾಲ್ಲೂಕಿನ ಭೀಮನಬಂಡೆ ಗ್ರಾಮದಲ್ಲಿರುವ ಶ್ರೀಶುಭೋದಯ ವೃದ್ಧಾಶ್ರಮಕ್ಕೆ ಶ್ರೀ ಕೌಶಿಕ್ ನಾಯ್ಡುರವರು ಕೊಡುಗೆಯಾಗಿ ನೀಡಿದ 45 ಲೀಟರ್ ಕೂಲರ್ ಅನ್ನು ಸ್ವೀಕರಿಸಿದ ಅವರು ಆಶ್ರಮದ ನಿವಾಸಿಗಳ ಪರವಾಗಿ ಕೌಶಿಕ್ ನಾಯ್ಡುರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದು, ಕೂಲರ್ ತಂಪಾದ ಗಾಳಿಯನ್ನು ಬಳಕೆ ಮಾಡಿದರು.

About The Author

Leave a Reply

Your email address will not be published. Required fields are marked *