March 6, 2026
000001

ಹಿರಿಯೂರು :

ಎಲ್ಲಾ ಸಮಾಜ ಮತ್ತು ಸಮುದಾಯವನ್ನು ಒಳಗೊಳ್ಳುವ ಜಾತ್ಯತೀತ ನಾಯಕ ಕರ್ನಾಟಕದ ದೀರ್ಘ ಕಾಲದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ, ಶೋಷಿತರ, ಅಂಚಿಗೆ ತಳ್ಳಲ್ಪಟ್ಟವರ ಈ ನಾಡಿನ  ನಿಜ ದನಿ,ಗಟ್ಟಿದನಿ ಸನ್ಮಾನ್ಯ ಸಿದ್ದರಾಮಯ್ಯನವರು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರದ ಯಾಜ್ಞವಲ್ಕ್ಯ ಶಾಲೆಯ ಆವರಣದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ “ಪ್ರಸ್ತುತ ರಾಜಕಾರಣ ಮತ್ತು ಸಿದ್ದರಾಮಯ್ಯ  ಕುರಿತ ವಿಚಾರ ಸಂಕಿರಣ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎಂ.ಟಿ.ಸಿ.ಯ ಉಪಾಧ್ಯಕ್ಷರಾದ ನಿಖಿತ್ ರಾಜ್ ಮೌರ್ಯ ಅವರು ಮಾತನಾಡಿ, ಶ್ರೀ ಸಿದ್ದರಾಮಯ್ಯನವರ ಅಲ್ಪಸಂಖ್ಯಾತ ಹಿಂದುಳಿದ ದಲಿತ ಸಮುದಾಯಗಳನ್ನ ಸಂಘಟಿಸಿ  ಎಲ್ಲಾ ಜನಾಂಗದ ಬಡಜನರ ಹಸಿವನ್ನ ನೀಗಿಸಿದ ಸಿದ್ದರಾಮಯ್ಯ ನಾಡಿನ ಬಡಜನರ ಪಾಲಿನ ನಿಜವಾದ ಅನ್ನ ರಾಮಯ್ಯ ಹಾಗೂ ಹಲವು ಭಾಗ್ಯಗಳ ಸರದಾರರಾಗಿದ್ದಾರೆ ಎಂದರಲ್ಲದೆ,

ಸಿದ್ದರಾಮಯ್ಯ ಎಂದರೆ ಜನಪರ, ಜೀವಪರ,ಮತ್ತು ಮಾನವ ಪರ ವಿರೋಧ ಪಕ್ಷಗಳ ಪಾಲಿನ ಸಿಂಹ ಸ್ವಪ್ನವಾಗಿ, ಅತ್ಯುತ್ತಮ ಆಡಳಿತಗಾರರಾಗಿ, ಈ ನಾಡಿನ ಅಭಿವೃದ್ಧಿಯ ಹರಿಕಾರ ಸನ್ಮಾನ್ಯ ಸಿದ್ದರಾಮಯ್ಯನವರು. ದೇವರಾಜ ಅರಸು ನಂತರದಲ್ಲಿ ಸಾಮಾಜಿಕ ನ್ಯಾಯದ ಬಹುದೊಡ್ಡ ಹರಿಕಾರರಾಗಿದ್ದಾರೆ. ಅವರ ಆದರ್ಶಗಳು ಇಂದಿನ ಯುವ ಸಮುದಾಯಕ್ಕೆ ಮಾದರಿ ಮತ್ತು ಮೇಲ್ಪಂತಿ ರಾಜಕಾರಣಿ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾಜ್ಞವಲ್ಕ್ಯ ಶಾಲೆಯ ಸಂಸ್ಥಾಪಕರಾದ ಸುರೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು, ಶ್ರೀಮತಿ ಗೀತಾನಂದಿನಿಗೌಡ, ಮಾಜಿ ಸದಸ್ಯರಾದ ಗೀತನಾಗಕುಮಾರ್, ತಾಲೂಕು ಕುರುಬರ  ಸಂಘದ ಅಧ್ಯಕ್ಷರಾದ ಮಹಂತೇಶ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಜಾತ, ಕನಕ ಬ್ಯಾಂಕ್ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಮುಖಂಡರಾದ ವೆಂಕಟೇಶ್, ರಜಿಯಸುಲ್ತಾನ, ಕಂದಿಕೆರೆ ಅವಿನಾಶ್, ಪಾಂಡು, ಓಂಕಾರ್, ನಂದಿಹಳ್ಳಿ ನಾಗರಾಜು, ಶ್ರೀನಿವಾಸ್, ರಮೇಶ ಹರ್ತಿಕೋಟೆ, ಗಿರೀಶ್ ಕೋಡಿಹಳ್ಳಿ, ವಿನಯ್ಯ, ಮಧು, ರಘುರಾಯಣ್ಣ, ಸೇರಿದಂತೆ ಹಲವು ಯುವಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *