
ಹಿರಿಯೂರು:
ದೇಶದಾದ್ಯಂತ ಬಿ.ಜೆ.ಪಿ.ಪಕ್ಷದ 2025-26ನೇ ಸಂಘಟನಾ ಪರ್ವ ನಡೆಯುತ್ತಿರುವುದರ ಅಂಗವಾಗಿ ಹಿರಿಯೂರು ಮಂಡಲದ ಒ.ಬಿ.ಸಿ. ಮೋರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ತಾಲ್ಲೂಕು ಮಂಡಲದ ಅಧ್ಯಕ್ಷರಾದ ಕೆ.ಅಭಿನಂದನ್ ಅವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂಬುದಾಗಿ ತಾಲ್ಲೂಕು ಬಿ.ಜೆ.ಪಿ. ಒ.ಬಿ.ಸಿ.ಮೋರ್ಚಾ ನೂತನ ಅಧ್ಯಕ್ಷರಾದ ಸಿ.ಮುರುಳಿಧರ್ ತಿಳಿಸಿದ್ದಾರೆ.
ನಗರದಲ್ಲಿ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ನಡೆಸಲಾದ ತಾಲೂಕು ಬಿಜೆಪಿ ಒಬಿಸಿ ಮೋರ್ಚಾ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಕುರಿತು ಮಾತನಾಡಿದ ಹಿರಿಯೂರು ತಾಲೂಕು ಬಿಜೆಪಿ ಒಬಿಸಿ ಮೋರ್ಚಾ ನೂತನ ಅಧ್ಯಕ್ಷರಾದ ಸಿ.ಮುರುಳಿಧರರವರು ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಸುದೃಢಗೊಳಿಸುತ್ತಾ ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಶಕ್ತಿ ಪಕ್ಷದ ಏಳಿಗೆಗೆ ಶ್ರಮಿಸಬೇಕು ಎಂಬುದಾಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ
ಬಿ.ಜೆ.ಪಿ.ಒ.ಬಿ.ಸಿ.ಮೋರ್ಚಾ ನೂತನ ಉಪಾಧ್ಯಕ್ಷರುಗಳಾಗಿ ಶಿವಮೂರ್ತಿ, ಆರ್.ಸುಧಾಕರ್, ಆರ್.ನಾಗರಾಜ್, ಎಸ್.ಬಸವರಾಜ್, ಸಿ.ನವೀನ್ ಕುಮಾರ್, ರಂಗಪ್ಪ ಸೀಗೇಹಟ್ಟಿ, ಬಸವರಾಜ್ ಉಪ್ಪಾರ್ ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ರಂಗಸ್ವಾಮಿ ಆಯ್ಕೆಯಾಗಿದ್ದಾರೆ.
ಒ.ಬಿ.ಸಿ.ಮೋರ್ಚಾ ನೂತನ ಕಾರ್ಯದರ್ಶಿಗಳಾಗಿ ರಂಗನಾಥ್, ಅಜ್ಜಯ್ಯ, ಎ.ಪರಮೇಶ್, ಮಂಜುನಾಥ್, ಕರಿಓಬೇನಹಳ್ಳಿ ಮಾರಣ್ಣ, ಚಿದಾನಂದ, ತಿಪ್ಪೇಸ್ವಾಮಿ, ಒ.ಬಿ.ಸಿ. ಕಾರ್ಯಾಲಯದ ಸದಸ್ಯರುಗಳಾಗಿ ಜಿ.ಬಾಲಕೃಷ್ಣ, ದೇವರಾಜ್ ಆಚಾರ್, ಪ್ರವೀಣ್ ಉಪ್ಪಾರ್, ಆರ್ .ಮುರುಳಿಧರ್ , ಕೃಷ್ಣಕುಮಾರಸೂರಪ್ಪನಹಟ್ಟಿ, ಗುರುಮೂರ್ತಿ ಇವರುಗಳು ಆಯ್ಕೆಯಾಗಿದ್ದಾರೆ. ಒ.ಬಿ.ಸಿ. ನೂತನ ಕಾರ್ಯಕಾರಿಣಿ ಸದಸ್ಯರುಗಳಾಗಿ ಲೋಹಿತ್ ರೆಡ್ಡಿ, ಪವನ್ ಕುಮಾರ್ ರೆಡ್ಡಿ, ಕೆ.ಟಿ.ರಮೇಶ್, ಕೆ.ಬಸವರಾಜ್, ದೇವರಾಜ್ ಈಶ್ವರಗೆರೆ, ಪ್ರಕಾಶ್ ಬಲಿಜ, ಮುತ್ತುವೇಲ್, ಕಾರ್ತಿಕ್ ರೆಡ್ಡಿ, ಹರೀಶ್, ಜಿ.ಕೆ.ಮಂಜುನಾಥ್, ಶ್ರೀಧರಹೇಮದಳ, ಆರ್.ರಮೇಶ್, ನಿಂಗರಾಜ್ ಬಿ.ರೊಪ್ಪ, ಸಿದ್ದೇಶ್ ಸಿ.(ಉಪ್ಪಿ) ಸಾಲುಹುಣಸೆ, ವೀರೇಶ್ ಗೌಡ, ಜಯಣ್ಣ, ಸಿದ್ದೇಶ್, ರಘುಮೂರ್ತಿ, ವೀರೇಶ್, ರಂಗೇನಹಳ್ಳಿಪಾತಲಿಂಗಪ್ಪ, ಅಣ್ಣಪ್ಪದಾಸನಮಾಳಿಗೆ , ನಾಗೇಂದ್ರಪ್ಪ, ನಿಜಿಯಾದವ, ಬಾಲಕೃಷ್ಣ, ದಯಾನಂದ, ಚಿದಾನಂದ, ಮಂಜುನಾಥ, ಮಂಜುನಾಥಮಡಿವಾಳ, ಗೌಡಪ್ಪ, ರಮೇಶ್ ಹೆಚ್.ಆರ್.ಬೆಸ್ತಾರ್, ಬಸವರಾಜ್ ಜಿ.ಕೋಡಿಹಳ್ಳಿ, ಕರಿಯಣ್ಣ, ಪಾತಲಿಂಗಪ್ಪ, ವೀರೇಶ್ ಶಿಡ್ಲಯ್ಯನಕೋಟೆ, ಲಿಂಗರಾಜ್ ಯಾದವ್ ಕಲ್ಲಹಟ್ಟಿ, ಪ್ರಭು, ತಿಪ್ಪೇಸ್ವಾಮಿ, ಮಂಜು, ಅಜಯ್, ನಾಗೇಶ್, ಮಂಜುನಾಥ್ ರಾವ್, ನಂದನ್ ಕುಮಾರ್, ಗಣೇಶ್, ಬಿ.ರಘು, ಎಂ.ನಾಗರಾಜು, ಬಿ.ಮಹಂತೇಶ್, ಎಸ್.ಪ್ರಕಾಶ್, ಎಸ್.ರಘು, ದಿಲೀಪ್ ಇವರುಗಳು ಆಯ್ಕೆಯಾಗಿದ್ದಾರೆ.

