March 3, 2026
00001

ಹಿರಿಯೂರು:

ಕಂಟೈನರ್ ಲಾರಿ, ಖಾಸಗಿ ಸೀಬರ್ಡ್  ಬಸ್ ಮತ್ತು ಶಾಲಾ ಮಕ್ಕಳ ಪ್ರವಾಸದ  ಬಸ್  ಅಪಘಾತದಲ್ಲಿ 6 ಮಂದಿ ಸುಟ್ಟು ಕರಕಲಾಗಿರುವ  ಘಟನೆ ಚಿತ್ರದುರ್ಗ ಜಿಲ್ಲೆಯ  ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪದ ಗೊರ್ಲಡಕು ಬಳಿಯ ಬಳಿ ಎನ್.ಹೆಚ್.48 ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.

ಖಾಸಗಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಬೆಂಕಿ ಹತ್ತಿ ಉರಿದಿದೆ. ಈ ಘಟನೆಯಲ್ಲಿ ಕಂಟೈನರ್ ಲಾರಿ ಚಾಲಕ ಸೇರಿದಂತೆ ಖಾಸಗಿ ಬಸ್ಸಿನಲ್ಲಿದ್ದ 5 ಮಂದಿ ಸಾವನ್ನಪ್ಪಿ, 13ಕ್ಕೂ ಹೆಚ್ಚಿನವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಪಘಾತವು ಬೆಳಗಿನ ಜಾವ 1.45 ಗಂಟೆ ಸುಮಾರಿಗೆ ಸಂಭವಿಸಿದೆ.

ಡಿಸೆಂಬರ್ 25ರ ಗುರುವಾರ ಮುಂಜಾನೆ ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್  ಬಸ್ ಎದುರಿನಿಂದ ಬಂದ ಟ್ರಕ್ ಡಿವೈಡರ್ (ಭೀಕರ ಅಪಘಾತ) ಜಿಗಿದು ಬಂದು ಡಿಕ್ಕಿ ಹೊಡೆದಿದೆ.

ಎ.ಎಂ.ನವ್ಯ(26), ಹೆಚ್.ಸಿ.ಮಾನಸ(27) ಚನ್ನರಾಯಪಟ್ಟಣ, ರಶ್ಮಿ ಆರ್.ಮಹಾಲೆ(24), ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಬಿಂದು(29), ಗ್ರೇಯಾ(5), ಬೆಂಗಳೂರಿನವರಾಗಿದ್ದಾರೆ. ಲಾರಿ ಚಾಲಕ ಉತ್ತರಪ್ರದೇಶದ ಕುಲದೀಪ್ ಯಾದವ್(29) ಮೃತಪಟ್ಟಿದ್ದಾರೆ.

ಡಿಕ್ಕಿಯಾದ ತಕ್ಷಣ ಬಸ್  ಬೆಂಕಿ ತಗುಲಿ ಹೊತ್ತಿ ಉರಿದಿದೆ. ಖಾಸಗಿ ಬಸ್ಸಿನಲ್ಲಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದು, 28 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಬಸ್ಸಿಗೆ ಡಿಕ್ಕಿ ಹೊಡೆದು ಕಂಟೈನರ್  ಲಾರಿ ಚಾಲಕ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ.

ಈ ದುರ್ಘಟನೆಯಲ್ಲಿ ತಾಯಿ ಬಿಂದು ಮತ್ತು 5 ವರ್ಷದ ಪುತ್ರಿ ಸಾವನ್ನಪ್ಪಿರುವ  ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ನವ್ಯ ಮತ್ತು ಮಾನಸ ಎನ್ನುವ ಇಬ್ಬರೂ ನಾಪತ್ತೆಯಾಗಿದ್ದು, ಅವರು ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ.ಈ ಘಟನಾ ಸ್ಥಳಕ್ಕೆ ಬಿ.ಜೆ.ಪಿ.ರವಿಕಾಂತೇಗೌಡ, ಎಸ್ಪಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

About The Author

Leave a Reply

Your email address will not be published. Required fields are marked *