
ಹಿರಿಯೂರು :
ನಗರದ 7 ಮತ್ತು 8ನೇ ವಾರ್ಡಿನಲ್ಲಿ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದ ರಸ್ತೆಗೆ ಕೆ.ಆರ್.ಐ.ಡಿ.ಎಲ್ ಇವರ ವತಿಯಿಂದ ಸುಮಾರು ಅಂದಾಜು 15 ಲಕ್ಷ ರೂಗಳ ಮೊತ್ತದ ಕಾಂಕ್ರೀಟ್ ರಸ್ತೆಯನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಿ ಸುಧಾಕರ್ ರವರ ಆದೇಶದ ಮೇರೆಗೆ ಹೊಸದಾಗಿ ನಿರ್ಮಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯರುಗಳಾದ ಶ್ರೀವಿಠಲ, ಶ್ರೀಮತಿ ಸೈದ ಫಿರ್ದೋಸ್, ಹಾಗೂ ಮುಖಂಡರುಗಳಾದ ಆಭಿದ್ ಹುಸೇನ್, ಮಹಮ್ಮದ್ ನೂರುಲ್ಲ, ಪಿ.ಎಸ್.ಸಾದತ್ ಉಲ್ಲಾ, ಶೈಬ್ ಉಲ್ಲ ಭಾಷಾ, ಅಣ್ಣಪ್ಪಸ್ವಾಮಿ, ಅಮೀರ್ ಸಾಬ್, ಗುರುಸ್ವಾಮಿ, ರಫೀಕ್, ಸೈಯದ್ ಕೈಯ್ಯೋ ಸೇರಿದಂತೆ ಹಲವಾರು ಮುಖಂಡರುಗಳು ಹಾಜರಿದ್ದು, ಕಾಮಗಾರಿಯನ್ನು ವೀಕ್ಷಿಸಿದರು.
