March 2, 2026
01

ಹಿರಿಯೂರು :

ತಾಲೂಕು ಕಚೇರಿ ಪಕ್ಕದಲ್ಲಿ ಫುಡ್ ಪಾರ್ಕ್ ಗೆ ಹೋಗುವ ರಸ್ತೆಯಲ್ಲಿ ನೀರಿನ ಪೈಪು ಒಡೆದು ಒಂದು ತಿಂಗಳಿನಿಂದ ನೀರು ಹರಿದು ಎಸ್.ಬಿ ಎಂ. ಬ್ಯಾಂಕ್ ಮುಂದುಗಡೆ ಹರಿದು ರಸ್ತೆ ಎಲ್ಲಾ ಹಾಳಾಗಿ ನೀರು ನೇರವಾಗಿ ಮುಖ್ಯ ರಸ್ತೆಗೆ ಹರಿದು ಬರುತ್ತಿದೆ. ಇದರಿಂದ ಎಸ್.ಬಿ ಎಂ. ಬ್ಯಾಂಕ್ ಮುಂದುಗಡೆ ಕೆಸರು ಗದ್ದೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂಬುದಾಗಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ಆಲೂರುಸಿದ್ದರಾಮಣ್ಣ ಆರೋಪಿಸಿದ್ದಾರೆ.

ನಗರಸಭೆಯವರು ಇದುವರೆಗೂ ಈ ಕಡೆ ಗಮನ ಹರಿಸದೆ ಇರುವುದು ತುಂಬಾ ವಿಷಾದನೀಯ ಸಂಗತಿಯಾಗಿದ್ದು, ಇದರಿಂದ ಟಾರ್ ರೋಡು ಸಹ ಹಾಳಾಗಿ ಹೋಗುತ್ತಿದ್ದು, ಪ್ರತಿನಿತ್ಯ ತಾಲ್ಲೂಕು ಕಚೇರಿಗೆ, ಎಸ್.ಬಿ.ಎಂ. ಬ್ಯಾಂಕಿಗೆ, ಪಿ.ಎಲ್.ಡಿ ಬ್ಯಾಂಕಿಗೆ ಬಂದು ಹೋಗುವ ಜನರಿಗೆ ಬಹಳ ಕಿರಿಕಿರಿ ಯಾಗುತ್ತಿದ್ದು, ನಗರಸಭೆಯವರು ಈ ತಕ್ಷಣ ಪೈಪ್ ಲೈನ್ ರಿಪೇರಿ ಮಾಡಿ ರೋಡ್ ಹಾಳಾಗುವುದನ್ನು ತಪ್ಪಿಸಿ, ಸಾರ್ವಜನಿಕರು ಓಡಾಡಲು ಅವಕಾಶ ಮಾಡಿಕೊಡಬೇಕು ಎಂಬುದಾಗಿ ಈ ಮೂಲಕ ಅವರು ಮನವಿ ಮಾಡಿದ್ದಾರೆ. 

About The Author

Leave a Reply

Your email address will not be published. Required fields are marked *