
ಹಿರಿಯೂರು:
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ನೌಕರರಾಗಿರುವ ಅನುಪ್ ಎಂಬುವರು ತನ್ನ ಸ್ವಂತ ಊರು ಮುಂಡರಗಿಗೆ ಹೋಗಿ ವಾಪಸ್ ಬರುವಾಗ ಹಿರಿಯೂರಿನ ಬೈಪಾಸ್ ರಸ್ತೆ ವೇದಾವತಿ ಬ್ರಿಡ್ಜ್ ಹತ್ತಿರ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿ ಬರುವಷ್ಟರಲ್ಲಿ ತಮ್ಮ 1ಲಕ್ಷ ಬೆಲೆಬಾಳುವ ಲ್ಯಾಪ್ಟಾಪ್ ಇದ್ದ ಬ್ಯಾಗ್ ಕಾಣೆಯಾಗಿರುವುದನ್ನು ಕಂಡು ಹತ್ತಿರದ ಹಿರಿಯೂರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ತಕ್ಷಣ ಹಿರಿಯೂರು ನಗರ ಠಾಣಾಧಿಕಾರಿ ಕರ್ತವ್ಯದಲ್ಲಿದ್ದ ಮುಖ್ಯಪೇದೆ ಸಿದ್ದೇಶ್ ರವರು ತಕ್ಷಣ ಕಾರ್ಯಾಚರಣೆ ನಡೆಸುವ ಮೂಲಕ ಕಾರ್ಯಪ್ರವೃತ್ತರಾಗಿ ಸಿ.ಸಿ.ಕ್ಯಾಮಾರಗಳ ಸಹಾಯದಿಂದ ಲ್ಯಾಪ್ಟಾಪ್ ಪತ್ತೆ ಮಾಡಿ, ಅದರ ಮಾಲೀಕರಿಗೆ ಹಿಂದಿರುಗಿಸಿರುತ್ತಾರೆ. ಪೊಲೀಸರ ಈ ಕಾರ್ಯವನ್ನು ಶ್ಲಾಘಿಸಿ, ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
