
ಹಿರಿಯೂರು:
ಹಿರಿಯ ವಕೀಲರಾದ ಬಿ.ಎನ್.ತಿಪ್ಪೇಸ್ವಾಮಿ ಹಾಗೂ ಅವರ ಸಹದ್ಯೋಗಿಗಳ ಬಳಗದ ವತಿಯಿಂದ ಕೆ.ಎ.ಎಸ್., ಪಿ.ಎಸ್.ಐ. ಮತ್ತು ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ಮೂರು ತಿಂಗಳ ಉಚಿತ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ಸ್ಪರ್ಧಾ ಅರಿವು ತರಬೇತಿ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂಬುದಾಗಿ ಹಿರಿಯ ವಕೀಲರಾದ ಬಿ.ಎನ್.ತಿಪ್ಪೇಸ್ವಾಮಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ಅಥವಾ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಲಿಂಕ್ ನಲ್ಲಿ ನೀಡಿರುವ ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು: https://forms.gle/xPbgUV22FWgKwb3d9. ಅರ್ಜಿ ಸಲ್ಲಿಸಲು ನವಂಬರ್ 3 ಅಂತಿಮ ದಿನವಾಗಿರುತ್ತದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಆಯ್ಕೆಯಾದ 100 ಅಭ್ಯರ್ಥಿಗಳಿಗೆ ನವಂಬರ್ 7 ರಂದು ಉಚಿತ ಅಧ್ಯಯನ ಸಾಮಗ್ರಿ ಹಾಗೂ ಆಯ್ಕೆ ಪತ್ರ ನೀಡಲಾಗುತ್ತದೆ, ಹೆಚ್ಚಿನ ಮಾಹಿತಿಗಾಗಿ 7838435231, 9880713803 ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಬಹುದಾಗಿದೆ ಎಂಬುದಾಗಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

