April 21, 2026
0003

ಹಿರಿಯೂರು:

ದೇಶವನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸಲು ಬ್ರಿಟೀಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನವರು ಮಹಿಳೆಯರು ಪುರುಷರಷ್ಟೇ ಪ್ರಬಲರು ಎಂಬುದನ್ನು ಸಾಬೀತುಪಡಿಸಿದ್ದು, ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಸಾಹಸ, ದಿಟ್ಟತನ ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು ಎಂಬುದಾಗಿ ಗ್ರೇಟ್-2 ತಹಶೀಲ್ದಾರ್ ಸಿ.ಜೆ.ಕೃಷ್ಣಕುಮಾರ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಿತ್ತೂರುರಾಣಿ ಚೆನ್ನಮ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಷ್ಟೇಅಲ್ಲ ಕಿತ್ತೂರು ರಾಣಿ ಚೆನ್ನಮ್ಮನ ಧೈರ್ಯ ಸಾಹಸದ ಜೊತೆಗೆ ದೇಶಭಕ್ತಿ, ದೇಶಪ್ರೇಮ, ಆಡಳಿತ ನೀತಿ, ಪ್ರಜೆಗಳನ್ನು ಪಾಲಿಸಿದ ರೀತಿ, ಎಲ್ಲವೂ ಬಹಳ ಮಹತ್ವದ್ದಾಗಿದ್ದು, ತನ್ನ ಸಾಮ್ರಾಜ್ಯದ ಉಳಿವಿಗಾಗಿ ಪ್ರಜೆಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆಯಾಗಿದ್ದಾರೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ತಹಶೀಸಿಲ್ದಾರ್ ಗ್ರೇಟ್  2 ಸಿ.ಜೆ.ಕೃಷ್ಣಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ  ಕುಮಾರ್, ಶ್ರೀನಿವಾಸ ರೆಡ್ಡಿ, ರಾಧಾ, ಮಹಾಲಕ್ಷ್ಮಿ, ಮೋಹನ್ ಕುಮಾರಿ, ಐಶ್ವರ್ಯ,  ಸೀಮಾ, ಕಾವ್ಯ, ಲತಾ ಸೇರಿದಂತೆ ತಾಲ್ಲೂಕು ಕಚೇರಿ  ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *