November 5, 2026
0004

ಹಿರಿಯೂರು :

ನಾನು ಈ ಕಾರ್ಯಕ್ರಮಕ್ಕೆ ಬಹಳ ದುಃಖದಿಂದ ಬಂದಿರುವೆ, ನಾನು ಸಿಎಂ ಆಗಿರುವುದನ್ನು ನೋಡಲು ನಮ್ಮ ಗೆಳೆಯ ಡಿ.ಸುಧಾಕರ್ ಇದ್ದಿದ್ದರೆ ಅತ್ಯಂತ ಸಂತೋಷಪಡುತ್ತಿದ್ದರು, ಸುಧಾಕರ್ ಇದ್ದಿದ್ದರೆ ಆತ ಎಷ್ಟು ಸಂತೋಷ ಪಡುತ್ತಿದ್ದ ಎಂಬುದಕ್ಕೆ ನಮ್ಮ ಸಹೋದ್ಯೋಗಿಗಳೇ ಸಾಕ್ಷಿ, ಆತ ಸಾಯುವ ಎರಡು ವರ್ಷಗಳ ಮುನ್ನ ನಾನು ಮಂತ್ರಿ ಆಗಿಲ್ಲದಿದ್ದರೂ ಚಿಂತೆ ಇಲ್ಲ ನನ್ನ ಸ್ನೇಹಿತ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ್ದ, ಆತನ ಕನಸು, ಈ ಜನರ ಮೇಲೆ ಇಟ್ಟಿದ್ದ ಪ್ರೀತಿ ಅಪಾರ.

ಆತನಿಗೆ ಜಾತಿ ಧರ್ಮ ಇರಲಿಲ್ಲ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದ ಅದೇ ರೀತಿ ನಾನು ಪ್ರಜಾಸೇವಕನಾಗಿ ನಿಮ್ಮ ಮುಂದೆ ನಿಂತಿರುವೆ, ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವ ದಿವಂಗತ ಡಿ.ಸುಧಾಕರ್ ಅವರೊಂದಿಗೆ ಇದ್ದಂತಹ ಒಡನಾಟವನ್ನು ವೇದಿಕೆಯ ಮೇಲೆ ಮಾತನಾಡುವಾಗ ನೆನಪಿಸಿಕೊಂಡರು.

ಕನಕಪುರದಷ್ಟೇ ಹಿರಿಯೂರು ಕೂಡ ನನಗೆ ಮುಖ್ಯ, ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದ ಕಾರಣ ಈ ಯೋಜನೆಗಳು ಜಾರಿಗೆ ಬಂದವು.

ಜೊತೆಗೆ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ ಧರ್ಮಪುರ ಹೋಬಳಿಯ ಕೆರೆಗಳನ್ನು ತುಂಬಿಸಿ ಈ ಭಾಗದ ರೈತರು ಬದುಕು ಬದಲಿಸುವ ಐತಿಹಾಸಿಕ ತೀರ್ಮಾನ ಮಾಡಿರುವುದು ನಮ್ಮ ಸರ್ಕಾರ, ನೀವು ಇಂದು ಕೊಟ್ಟಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸುವೆ, ನನಗೆ ಕನಕಪುರಕ್ಷೇತ್ರ ಎಷ್ಟುಮುಖ್ಯವೋ ಹಿರಿಯೂರು ಕ್ಷೇತ್ರವು ಅಷ್ಟೇ ಮುಖ್ಯ ನಿಮ್ಮ ಸೇವೆಗೆ ನಾನು ಬದ್ಧನಾಗಿದ್ದೇನೆ ಎಂಬುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

About The Author

Leave a Reply

Your email address will not be published. Required fields are marked *