
ಹಿರಿಯೂರು :
ಇಂದಿನ ಆಧುನಿಕ ಜಗತ್ತಿನಲ್ಲಿ ಕೇವಲ ಪಠ್ಯ ವಿಷಯಗಳಲ್ಲಿ ಮಾತ್ರ ಪರಿಣತಿ ಸಾಧಿಸಿದರೆ ಸಾಲದು, ಸಹಪಠ್ಯ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಬಾಲ್ಯದಿಂದಲೇ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ ಹೇಳಿದರು.

ನಗರದ ಅಸಂಷನ್ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಗ್ರ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ ಹಿರಿಯೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಿರಿಯೂರು, ಸಮೂಹ ಸಂಪನ್ಮೂಲ ಕೇಂದ್ರ ನಗರ ದಕ್ಷಿಣ ಮತ್ತು ವಿವಿಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 2026-27 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು, ಶಿಕ್ಷಣ ಇಲಾಖೆಯಿಂದ ನಡೆಸುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂಬುದಾಗಿ ಹೇಳಿದರು.

ಅಸಂಷನ್ ಚರ್ಚ್ ನ ಮುಖ್ಯಸ್ಥರಾದ ಫಾದರ್ ಡಿಕುನ್ನಾ ಮಾತನಾಡಿ, ಮಕ್ಕಳ ಪೋಷಕರು ಕೇವಲ ಅತಿಹೆಚ್ಚು ಅಂಕಗಳನ್ನು ಪಡೆಯಬೇಕೆಂದು ಮಕ್ಕಳ ಮೇಲೆ ಒತ್ತಡ ತರದೆ ಅವರಿಗೆ ಆಸಕ್ತಿಯಿರುವ ಕ್ರೀಡೆ, ಸಂಗೀತ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಾಧನೆ ಮಾಡಲು ಅಗತ್ಯವಾದ ತರಬೇತಿ ನೀಡಿದರೆ ಅವರು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಹೆಸರು ಮಾಡಲು ವೇದಿಕೆ ನಿರ್ಮಿಸಿದಂತೆ ಆಗುತ್ತದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ, ಅಸಂಷನ್ ಚರ್ಚ್ ಮುಖ್ಯಸ್ಥರಾದ ಫಾದರ್ ಡಿಕುನ್ನಾ, ಅಕ್ಷರ ದಾಸೋಹ ಅಧಿಕಾರಿ, ಮಹೇಶ್ವರರೆಡ್ಡಿ, ಶಿಕ್ಷಣ ಸಂಯೋಜಕರಾದ ಶಿವಾನಂದ್, ಕರ್ನಾಟಕ ಮಾಧ್ಯಮಅಕಾಡೆಮಿ ಪ್ರಶಸ್ತಿಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಕಾರ್ಯಕ್ರಮದ ಆಯೋಜಕರಾದ ಸಿ.ಆರ್.ಪಿ ಚರಣ್ ರಾಜ್, ಸಿ.ಆರ್.ಪಿ ಗಳಾದ ಮಂಜುನಾಥ್, ಆಶಾಲತಾ, ಸುಜಯ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ನಾಯ್ಕ, ಜಿಲ್ಲಾ ಖಜಾಂಚಿ ಶಿವಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಕೋಟಿಲಿಂಗಯ್ಯ, ಶಿಕ್ಷಕರ ಸಂಘದ ಖಜಾಂಚಿ ದಿವ್ಯನಾಥ್, ನಿರ್ಧೇಶಕರುಗಳಾದ ಲೋಕಮ್ಮ, ಮಧುಸೂದನ್, ನವೀನ್, ಮುಖ್ಯಶಿಕ್ಷಕರುಗಳಾದ ನಾಗರಾಜ್, ಬಸವರಾಜ್, ಅನುಸೂಯಮ್ಮ, ವೆಂಕಟೇಶ್, ಸಂತೋಷ್, ಪ್ರವೀಣ್ ಕುಮಾರ್, ಯಲ್ಲಪ್ಪ, ಮಂಜುನಾಥ್, ಹುಲುಗಪ್ಪ, ಮುದ್ದುಲಿಂಗಪ್ಪ, ಸಿಸ್ಟರ್ ಮಾರ್ತಾ, ಸಿಸ್ಟರ್ ಸ್ಟೆಲಾ ಜ್ಯೋತಿ, ಸೇರಿದಂತೆ ಅಸಂಷನ್ ಚರ್ಚ್ ಶಾಲೆ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
