November 5, 2026
0006

ಬೆಂಗಳೂರು :    

ಡಿ.ಸುಧಾಕರ್ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಪಕ್ಷಗಳು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಉಪಚುನಾವಣೆ ಘೋಷಣೆ ಆಗುವ ಸಾಧ್ಯತೆಗಳಿವೆ.

ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ.ಸುಧಾಕರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮೇ 10 ರಂದು ಕೊನೆಯುಸಿರೆಳೆದಿದ್ದರು. ಇದರಿಂದ ಹಿರಿಯೂರು ಕ್ಷೇತ್ರದ ಸದಸ್ಯ ಸ್ಥಾನ ತೆರವಾಗಿದೆ. ಸ್ಥಾನ ತೆರವಾದ 6 ತಿಂಗಳಲ್ಲಿ ಅದನ್ನು ಭರ್ತಿ ಮಾಡಬೇಕಿದೆ.

ನವಂಬರ್ 10ಕ್ಕೆ 6 ತಿಂಗಳಾಗಿದ್ದು, ಯಾವುದೇ ಸಮಯದಲ್ಲೂ ಉಪಚುನಾವಣೆಯ ವೇಳಾಪಟ್ಟಿ ಪ್ರಕಟವಾಗಬಹುದು.ಹೀಗಾಗಿ ಮೂರು ರಾಜಕೀಯ ಪಕ್ಷಗಳು ತಯಾರಾಗಿದ್ದು, ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷದಿಂದ ಯಾರು ಕಣಕ್ಕಿಳಿಯಲಿದ್ದಾರೆ. ಎನ್ನುವ ಕುತೂಹಲ ಇದೆ.

ತನ್ನ ಅಭ್ಯರ್ಥಿಗೇ ಎನ್.ಡಿ.ಎ ಟಿಕೆಟ್ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ಜೆಡಿಎಸ್ ಇದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪೂರ್ವಭಾವಿ ಸಭೆಯನ್ನೂ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿಯಿಂದ ಉಸ್ತುವಾರಿಗಳ ನೇಮಕವಾಗಿದೆ.

ಇದೆಲ್ಲದರ ನಡುವೆ ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮಂಗಳವಾರ ಹಿರಿಯೂರಿಗೆ ಭೇಟಿ ನೀಡಿ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಗಳಿಗೆ ಚಾಲನೆ ನೀಡಿದ್ದು, ಉಪಚುನಾವಣೆಯ ಬರಾಟೆ ಹಿರಿಯೂರು ಕ್ಷೇತ್ರದಲ್ಲಿ ರಂಗೇರಲಿದೆ.

ಈ ಮಧ್ಯೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಬೊಮ್ಮನಹಳ್ಳಿ ಬಾಬು ಮತ್ತೆ ಹಿರಿಯೂರು ಉಪಚುನಾವಣೆಗೆ ಎಂಟ್ರಿಯಾಗಿದ್ದು, ನಗರದಾದ್ಯಂತ ಅದ್ದೂರಿ ಕಟೌಟ್ ಗಳು, ಸ್ವಾಗತ ಕಮಾನುಗಳು ವಿಜೃಂಭಿಸುತ್ತಿದ್ದು, ಬಾಬುರವರ ಚುನಾವಣಾ ಪ್ರಚಾರ ಅದ್ದೂರಿಯಾಗಿದೆ. ಬೊಮ್ಮನಹಳ್ಳಿ ಬಾಬು ಈ ಕ್ಷೇತ್ರದಲ್ಲಿ ಯಾರ ಮತಗಳನ್ನು ಸೆಳೆಯುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್ ಹಾಗೂ ಎನ್.ಡಿ.ಎ ಅಭ್ಯರ್ಥಿ ಭವಿಷ್ಯ ನಿಂತಿದೆ.

About The Author

Leave a Reply

Your email address will not be published. Required fields are marked *