November 5, 2026
0007

ಹಿರಿಯೂರು:

ಹೆತ್ತ ತಂದೆ-ತಾಯಿ ಅಕ್ಷರ ಕಲಿಸಿದ ಗುರುಗಳು ಸದಾ ನಮ್ಮನ್ನು ಹೊತ್ತುಕೊಂಡು ಕಾಪಾಡುವ  ಭೂತಾಯಿ ಅನ್ನ ಕೊಡುವ ರೈತರು ಮಾತನಾಡಲು ಶಕ್ತಿ ಕೊಟ್ಟಿರುವ ತಾಯಿ ಭುವನೇಶ್ವರಿದೇವಿ ಕಾಯುವ ಸೈನಿಕರ ಋಣವನ್ನು ತೀರಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂಬುದಾಗಿ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಹೇಳಿದರು. 

ತಾಲೂಕಿನ ಸಕ್ಕರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2006-2007 ನೇ ಸಾಲಿನ ಹಳೆವಿದ್ಯಾರ್ಥಿಗಳ ಬಳಗ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾಗತೀಕರಣ, ಆಧುನೀಕರಣ, ನಗರೀಕರಣದಿಂದ ಇಂದು ನಗರ ಹಾಗೂ ಹಳ್ಳಿಯ ಪ್ರದೇಶಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ, ಆದಕಾರಣ ಹೆತ್ತ ತಂದೆ-ತಾಯಿಗಳನ್ನು ಮಕ್ಕಳು ವೃದ್ದಾಶ್ರಮಗಳಿಗೆ ಸೇರಿಸದೆ ಮನೆಯಲ್ಲಿಯೇ ಹಾರೈಕೆ ಮಾಡುವ ಮೂಲಕ ಅವರ ಬದುಕಿಗೆ ಆಸರೆಯಾಗಿ  ದುಡಿಯಬೇಕು ಎಂದರಲ್ಲದೆ,

ಇಂದಿನ ಯುವಪೀಳಿಗೆ ಮದ್ಯಪಾನ, ಧೂಮಪಾನ, ಮಾದಕವಸ್ತುಗಳು, ಜೂಜಾಟದಂತಹ ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಅಭಿರುಚಿ, ಆಸಕ್ತಿಗಳನ್ನು ಬೆಳೆಸಿಕೊಂಡು ತಮ್ಮ ಬದುಕಿನ ಗುರಿಯನ್ನು ಸಾಧಿಸಿದಾಗ ಮಾತ್ರ ತಂದೆ ತಾಯಿಗಳ ಕನಸು ನನಸಾಗುತ್ತದೆ ಎಂಬುದಾಗಿ ಹೇಳಿದರು.  

ಧರ್ಮಪುರ ಹೋಬಳಿ ಘಟಕದ ನೀರಾವರಿ ಸಮಿತಿ ಅಧ್ಯಕ್ಷರಾದ ಎಸ್.ಎನ್.ಗಿರೀಶ ಮಾತನಾಡಿ, 2006 ಮತ್ತು 2007ನೇ ಸಾಲಿನ ವಿದ್ಯಾರ್ಥಿಗಳು ಸೇರಿ ಅಕ್ಷರ ಕಲಿಸಿದ ಗುರುಗಳಿಗೆ ನಮನ ಸಲ್ಲಿಸಲು ಗುರುವಂದನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿದ್ಯಾರ್ಥಿ ಮತ್ತು ಗುರುಗಳ ಆತ್ಮೀಯತೆ ಪ್ರೀತಿ ವಾತ್ಸಲ್ಯ ಮಮತೆಯ ಮೌಲ್ಯವನ್ನು ತಿಳಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಟಿ.ತಿಮ್ಮರಾಜು. ಚಿಕ್ಕನಾಗಪ್ಪ. ಅನುಸೂಯದೇವಿ. ವಿ.ಟಿ.ತಿಪ್ಪೇಸ್ವಾಮಿ. ಶಿಕ್ಷಕರಾದ ಡಿ.ಆರ್.ರಮೇಶ್, ಎನ್.ಪಿ.ಮಹೇಶಣ್ಣ, ಬಿ.ಮಲ್ಲಿಕಾರ್ಜುನ್,         ಎ.ಸುನಂದಮ್ಮ, ಡಿ.ರಂಗಯ್ಯ, ಎನ್.ಮಲ್ಲೇಶಪ್ಪ, ಹೆಚ್.ಶಿವಮೂರ್ತಿ, ಎಸ್.ಕೆ.ಲಕ್ಷ್ಮೀಪತಿ, ಬಿ.ಎಸ್.ಮೋಹನ, ಎನ್.ರಂಗನಾಥ್, ಎಸ್.ಆರ್.ರಂಗನಾಥ್, ಸೂಲಗಿತ್ತಿಸಣ್ಣಮ್ಮ, ಶಾಂತಮ್ಮ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಸ್.ಎನ್. ರಘುನಾಥ್. ಮಾಜಿ ಎಸ್ ಡಿಎಂ ಸಿ ಅಧ್ಯಕ್ಷರಾದ ಎಸ್.ಬಿ. ರಂಗಸ್ವಾಮಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಎಸ್.ಜಿ.ದೇವರಾಜ್, ಎಸ್.ಆರ್.ರಾಜಣ್ಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಓ.ರಂಗನಾಥ್, ಪಶುಪತಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಎಸ್.ಟಿ.ರಾಘವೇಂದ್ರ, ನಟರಾಜ್, ಗುಂಡಪ್ಪ, ತಿಮ್ಮಯ್ಯ, ಪವಿತ್ರ, ಯುವಮುಖಂಡರಾದ ಎಸ್.ಆರ್.ರಂಗನಾಥ್, ರಾಮನಾಯಕ, ಆರ್.ಪವಿತ್ರ, ಜಿ.ಅಮೃತೇಶ್, ಲಕ್ಷ್ಮಿದೇವಿ, ಕವಿತಾ, 2006-2007 ನೇ ಸಾಲಿನ ವಿದ್ಯಾರ್ಥಿಗಳಾದ ಎಸ್.ಬಿ.ಯರಗುಂಟೇಶ್ವರ, ಎನ್.ವೈ.ಶಿವಕುಮಾರ್, ಎಸ್.ಎಸ್.ಮಧು, ಎಸ್.ಎ. ಶ್ರೀನಿವಾಸ್, ಎಸ್.ಬಿ.ಮಂಜುನಾಥ್, ಎಸ್.ಆರ್.ಲಕ್ಷ್ಮಿರಂಗನಾಥ್, ಎಸ್.ಪಿ.ಶಿವರಾಜ್, ಎಸ್.ಆರ್.ಮುತ್ತುರಾಜ್, ಎಸ್.ವೈ.ವಿನಾಯಕ, ಎಸ್.ವಿ.ರಂಗರಾಜು, ಎಸ್.ಎನ್. ಜಜ್ಜ ರಂಗಯ್ಯ, ಎಸ್.ಪಿ.ನೇತ್ರಾವತಿ, ಎಸ್.ಬಿ.ರಮ್ಯ, ಎಸ್‌.ಬಿ.ಲತಾ, ಎಸ್.ಟಿ.ಸುಧಾ, ಎಸ್.ಎ.ಸುಮಾ, ಎಸ್.ಆರ್.ರಮ್ಯ, ಎಸ್.ಎನ್. ಯಶಂಕು. ಎಸ್.ಕೆ.ಶಿಲ್ಪ, ಎಸ್.ಆರ್.ಸಣ್ಣಮ್ಮ, ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *