
ಹಿರಿಯೂರು :
ಇಂದಿನ ಒತ್ತಡದ ಬದುಕಿನಲ್ಲಿ ಕ್ರೀಡೆಗಳು ಮನಸ್ಸಿಗೆ ಉಲ್ಲಾಸ ಹಾಗೂ ಸಂತೋಷವನ್ನು ಕೊಡುವ ಜೊತೆಗೆ ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತವೆ, ಈ ನಿಟ್ಟಿನಲ್ಲಿ ಇಂದಿನ ಯುವಕರು ಹೆಚ್ಚು ಹೆಚ್ಚು ಕ್ರೀಡೆಗಳಳ್ಲಿ ಭಾಗವಹಿಸುವ ಮೂಲಕ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ವಸಂತಕುಮಾರ್ ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣ ಹಿರಿಯೂರಿನಲ್ಲಿ ರೆಡ್ ಫೌಂಡೇಷನ್ ಹಾಗೂ ರೋಟರಿ ಕ್ಲಬ್, ಸಮನ್ವಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಡೈಲಿ ವಾಕಿಂಗ್ ಗ್ರೂಪ್ ಇವರುಗಳ ಸಹಯೋಗದೊಂದಿಗೆ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ರೆಡ್ ಫೌಂಡೇಷನ್ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಶಾರದಾಸ್ ಸ್ಪೋರ್ಟ್ ಮಾಲೀಕರು ರಾಮಕೃಷ್ಣ, ರೋಟರಿ ಕಾರ್ಯದರ್ಶಿ ಚಂದ್ರಹಾಸ್, ರೈತ ಸಂಘದ ಮುಖಂಡರಾದ ಕೆ.ಸಿ.ಹೊರಕೇರಪ್ಪ, ರೆಡ್ ಫೌಂಡೇಷನ್ ಖಜಾಂಚಿ ದಯಾನಂದ ಹಾಗೂ ಕಾರ್ಯದರ್ಶಿಗಳಾದ ಕೆ.ಅಂಬಿಕಾ, ಸಮನ್ವಯ ಕ್ಲಬ್ ನ ಅಧ್ಯಕ್ಷರಾದ ಸಾಜಿದ್, ಕಾರ್ಯದರ್ಶಿ ಯೋಗೇಶ್ ಹಾಗೂ ಸಮನ್ವಯ ಕ್ಲಬ್ ನ ಪಿ.ಪರಮೇಶ್, ಸಮನ್ವಯ ಕ್ಲಬ್ ನ ಪದಾಧಿಕಾರಿಗಳು ಹಾಗೂ ಶೈನಿಂಗ್ ಸ್ಟಾರ್ ಕ್ರಿಕೆಟ್ ಅಕಾಡೆಮಿಯ ಯುವ ಆಟಗಾರರಾದ ಧ್ರುವಕುಮಾರ್ ಹಾಗೂ ಹಿರಿಯ ಆಟಗಾರರು, ಯುವ ಆಟಗಾರರು, ಕ್ರೀಡಾಪ್ರೇಮಿಗಳು ಭಾಗವಹಿಸಿದ್ದರು.
