September 12, 2026
005

ಹಿರಿಯೂರು :

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರು ಕ್ರೀಡಾಕ್ಷೇತ್ರಕ್ಕೆ ನೀಡಿದ ಕೊಡುಗೆ  ಅಪಾರವಾಗಿದೆ,  ಧ್ಯಾನ್ ಚಂದ್ ರವರು ಸತತ ಮೂರು ಒಲಂಪಿಕ್ ಗಳಲ್ಲಿ  ಭಾರತ ದೇಶಕ್ಕೆ  ಚಿನ್ನದ ಪದಕವನ್ನು ತಂದು ಕೊಟ್ಟಂತಹ ಶ್ರೇಷ್ಠ ವ್ಯಕ್ತಿಯಾಗಿದ್ದು, ಭಾರತ ಸರ್ಕಾರ ಹಾಕಿಕ್ರೀಡೆಯಲ್ಲಿ ಸಾಧನೆ ಮಾಡಿ ದೇಶಕ್ಕೆ ಗೌರವ ತಂದ ಧ್ಯಾನ್ ಚಂದ್ ರವರಿಗೆ ಗೌರವ ಸಲ್ಲಿಸಲು ಅವರ ಹುಟ್ಟಿದ ದಿನವನ್ನು ಪ್ರತಿ ವರ್ಷ  ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂಬುದಾಗಿ ಮುಖ್ಯಅತಿಥಿಗಳಾದ ಖಲಂದರ್ ಭಾಷ ಹೇಳಿದರು.

ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾದಿನದ ಪ್ರಯುಕ್ತ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರವರ ಭಾವಚಿತ್ರಕ್ಕೆ ವಿಶೇಷಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಇಂದಿನ ಯುವಶಕ್ತಿ ಮತ್ತು ವಿದ್ಯಾರ್ಥಿಗಳು ಕ್ರೀಡೆಗಳನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಕ್ರೀಡಾ ಕ್ಷೇತ್ರದ ಉಜ್ವಲ ಭವಿಷ್ಯಕ್ಕೆ ಶ್ರಮಿಸುವತಾಗಬೇಕು ಜೊತೆಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟುಗಳಾದ ಸಿ.ಕೆ.ಶ್ರಾವಣಿ. ಅಂಜುರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್ ಮಠದ್ ಅವರು  ಧ್ಯಾನ್ ಚಂದ್ ರವರ ಸಾಧನೆ ಕುರಿತು ಪ್ರಾಸ್ತಾವಿಕವಾಗಿ ಮಾತಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಲಂದರ್ ಭಾಷ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕರಾದ ಹನುಮಂತರೆಡ್ಡಿ, ಕನ್ನಡ ಭಾಷಾ ಶಿಕ್ಷಕರಾದ ನಂದನ್. ಸೈಯದ್ ನುಸ್ರತ್. ಗೀತಾ ಮೇಡಂ. ನಿಂಗಮ್ಮ , ದೈಹಿಕ ಶಿಕ್ಷಣ ಶಿಕ್ಷಕ ರಘು. ಅನಿತ. ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕ್ರೀಡಾ ದಿನದ ಅಂಗವಾಗಿ ಶಾಲೆಯ ಗ್ರೀನ್. ರೆಡ್. ಎಲ್ಲೋ. ಬ್ಲೂ  ಹೌಸ್ ಗಳ  ನಾಲ್ಕು ತಂಡಗಳಿಗೆ ಹ್ಯಾಂಡ್ ಬಾಲ್ ಪಂದ್ಯಾಟವ ನಡೆಯಿತು.  ಅಂತಿಮ ಪಂದ್ಯಾವಳಿಯಲ್ಲಿ  ಎಲ್ಲೋ ಹೌಸ್ ತಂಡ  ಪ್ರಥಮ ಸ್ಥಾನವನ್ನು,  ಬ್ಲೂಹೌಸ್ ದ್ವಿತೀಯ  ಸ್ಥಾನಪಡೆಯಿತು.

About The Author

Leave a Reply

Your email address will not be published. Required fields are marked *