September 12, 2026
004

ಹಿರಿಯೂರು :

ದಾವಣಗೆರೆ ಜಿಲ್ಲಾ ಫೋಟೋ ಗ್ರಾಫರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಸಂಘ ಹಾಗೂ ಫೋಟೋಗ್ರಾಫರ್ಸ್ ವೆಲ್ ಫಾರ್ ಅಸೋಸಿಯೇಷನ್ ವತಿಯಿಂದ ಶ್ರೀಮದ್ ಅಭಿನವ ರೇಣುಕಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಧ್ಯ ಕರ್ನಾಟಕದ ಅತಿ ದೊಡ್ಡ ಛಾಯಾಮೇಳ ಹಾಗೂ ದೇವನಗರಿ ಪ್ರೊ.ಇಮೇಜ್  ಕಾರ್ಯಕ್ರಮದಲ್ಲಿ ತಾಲೂಕಿನ ಖ್ಯಾತ ಸಂಘಟಕ ಹಾಗೂ ಚಿತ್ರದುರ್ಗ ಜಿಲ್ಲಾ ಛಾಯಾಗ್ರಾಹಕ  ಸಂಘದ ಉಪಾಧ್ಯಕ್ಷರಾದ ಎಸ್.ಎಚ್.ಕಾಂತರಾಜ್ ಹುಲಿಯವರಿಗೆ ಛಾಯಾ ಸೇವಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೊಟ್ಟೂರು ಹಿರೇಮಠ ಕ್ಷೇತ್ರದ ಪರಮಪೂಜ್ಯ ಶಿವಪ್ರಕಾಶ್ ಮಹಾಸ್ವಾಮಿಗಳು, ಮುಜರಾಯಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವರಾದ ಕೆ.ಬಸವಂತಪ್ಪ. ದಾವಣಗೆರೆ ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾದ ವಿಜಯಕುಮಾರ್ ಜಾದವ್, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಸೈಯದ್ ರಹಮತ ಉಲ್ಲಾ, (ಮುನ್ನ) ಜಿಲ್ಲಾ ಕಾರ್ಯದರ್ಶಿ ನಾಗಣ್ಣ. ಹಿರಿಯೂರು ತಾಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಎ.ರಾಮಕೃಷ್ಣಪ್ಪ. ಉಪಾಧ್ಯಕ್ಷರಾದ ಗೋವಿಂದರಾಜು  ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *