September 13, 2026
00004

ಹಿರಿಯೂರು :

ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್‌.ಪಿ.ರವಿಶಂಕರ್ ನೇತೃತ್ವದಲ್ಲಿ ಅಭಿವೃದ್ಧಿಪರ ಕಾರ್ಯಕ್ರಮ ನಿರ್ವಹಿಸುತ್ತಾ ಬಂದಿದ್ದು, ಇದು ಕೇವಲ ಸಂಘಟನೆಯಾಗಿ ಉಳಿಯದೆ ಸಂಕಷ್ಟದಲ್ಲಿ ಇರುವವರಿಗೆ ನೆರವಾಗುತ್ತಿದೆ ಎಂಬುದಾಗಿ ವಾಗ್ದೇವಿ ವಿದ್ಯಾಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ವಿ.ಅಮರೇಶ್ ಹೇಳಿದರು.

ನಗರದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಾಗೂ ಹಿರಿಯೂರು ಆರ್ಯವೈಶ್ಯ ಮಂಡಳಿ ಸಹಯೋಗದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಜಿಎವಿಎಸ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ, ನಂತರ ಅವರು ಮಾತನಾಡಿದರು.

ದೇಶದಲ್ಲೇ ಪ್ರಥಮ ಬಾರಿ ಕನಿಷ್ಠ 5ಸಾವಿರ ಉದ್ಯಮ ಸ್ಥಾಪನೆ ಮಾಡುವ ಮೂಲಕ 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಎಂಟು ವರ್ಷಗಳಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 40ಕೋಟಿ ರೂಗಳಿಗಿಂತ ಹೆಚ್ಚು ಹಣವಿನಿಯೋಗಿಸುವ ಮೂಲಕ ಅಶಕ್ತರಿಗೆ ಹಾಗೂ ಅವಶ್ಯಕತೆ ಇರುವವರಿಗೆ ನೆರವಿನ ಸಹಾಯಹಸ್ತ ಚಾಚಲಾಗಿದೆ ಎಂಬುದಾಗಿ ಹೇಳಿದರು

ಸಮುದಾಯದ ಜನತೆ ವ್ಯಾಪಾರ, ವ್ಯವಹಾರ ಬೆಳೆಸಿಕೊಳ್ಳಲು ಜಿಎವಿಎಸ್ ಮಾರ್ಗದರ್ಶನ ಸಲಹೆ ಸಹಕಾರ ನೀಡುತ್ತಿದೆ, ಬ್ಯಾಂಕಿಂಗ್ ಕ್ಷೇತ್ರದಿಂದ ದೊರೆಯುವ ಸೌಲಭ್ಯಗಳಿಗೆ ಉತ್ತೇಜನ ನೀಡುವ ಜೊತೆಗೆ ಇತ್ತೀಚಿನ ಜಾಗತಿಕ ಪ್ರಪಂಚದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಯುವಕರಲ್ಲಿ ದೇಶಭಕ್ತಿ ಬಿಂಬಿಸುವ ಕೆಲಸ ನಿರ್ವಹಿಸುತ್ತಿದೆ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀಕನ್ಯಕಾ ಪರಮೇಶ್ವರಿ ದೇವಾಲಯದಿಂದ ಹೊರಟ ಸಂಕಲ್ಪ ಯಾತ್ರೆ ನಗರದ ಪ್ರಮುಖ ರಸ್ತೆಗಳ ಮೂಲಕ ವಾಗ್ದೇವಿ ಶಾಲೆಯವರೆಗೆ ಸಾಗಿತು.ಆರ್ಯವೈಶ್ಯ ಮಂಡಳಿ ಅಂಗಸಂಸ್ಥೆ ಎಲ್ಲಾ ಸದಸ್ಯರು ಸಮವಸ್ತ್ರ ಧರಿಸಿ, ಆರ್ಯವೈಶ್ಯ ಸಮಾಜದ ಹೊಸಬಾವುಟ ಹಿಡಿದು, ಜಯಘೋಷಕೂಗುತ್ತಾ, ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಪಿ..ನಾಗರಾಜ್, ವಾಸವಿಯುವಜನ ಸಂಘದ ಅಧ್ಯಕ್ಷ ವಿ.ಜಗದೀಶ್, ನಗರಸಭೆ ಮಾಜಿ ಸದಸ್ಯ ರಮೇಶ್,ದೇವರಾಜಮೂರ್ತಿ, ರಾಜಕುಮಾರ, ರಾಕೇಶ್ ಮಂಜಣ್ಣ, ವೆಂಕಟಾಚಲ, ಅನಂತಕುಮಾರ್, ಪಿ.ಆರ್.ಸತೀಶ್ ಬಾಬು, ಹರೀಶ್, ಮಹಾಬಲೇಶ್ವರಶೆಟ್ಟಿ, ರಾಜೇಶ್, ನಾಗೇಶ್, ಅರುಣ್, ಪ್ರಭಾಕರ್, ಆಂಜನೇಯ, ಬಾಲಾಜಿ, ಲಕ್ಷ್ಮೀಶ, ಪ್ರತಾಪ್, ಪ್ರಸಾದ್, ಅನಂತ್ ಕುಮಾರ್, ಸಂಧ್ಯಾಅಮರೇಶ್, ಗೀತಾರಾಧಾಕೃಷ್ಣ, ಶ್ರೀಧರ್ ಸೇರಿದಂತೆ ಇತರರ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *