September 14, 2026
0003

ಹಿರಿಯೂರು :    

ನಗರದ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 3.37 ಲಕ್ಷ ರೂಗಳ ನಿವ್ವಳ ಲಾಭವನ್ನು ಗಳಿಸಿ, ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂಬುದಾಗಿ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೈ.ಎಸ್.ಉಮಾಶಂಕರ್ ಹೇಳಿದರು.

ನಗರದ ಸಿದ್ಧನಾಯಕರ ವೃತ್ತದ ಪೇಟೆಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.

ನಮ್ಮ ಸಂಘವು ಕಳೆದ ಸಾಲಿನಲ್ಲಿ 3.29 ಕೋಟಿ ರೂಗಳ ದುಡಿಯುವ ಬಂಡವಾಳ ಹೊಂದಿದ್ದು, 2026ರ ಮಾರ್ಚ್ ಅಂತ್ಯಕ್ಕೆ 1.57 ಕೋಟಿ ರೂಗಳ ಸಾಲ ಬಾಕಿ ಇದೆ, ಸಂಘವು 26 ವಸಂತ ಪೂರೈಸಿದ್ದು, ಸದಸ್ಯರು ಸಂಘದ ವ್ಯವಹಾರದಲ್ಲಿ ಭಾಗವಹಿಸಿ ಸಂಘದ ಏಳಿಗೆಗೆ ಶ್ರಮಿಸಬೇಕು ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಓ.ಜಯಣ್ಣ, ನಿರ್ದೇಶಕರಾದ ಬಿ.ವಿ.ತ್ರಯಂಬಕೇಶ್ವರ್, ಎನ್.ಬಿ.ವಾಗೀಶ್, ಸಿ.ಎಂ.ಸ್ವಾಮಿ, ಆರ್.ಟಿ.ಪ್ರಶಾಂತ್ ಹೆಚ್.ಎಸ್.ಮಹೇಶ್, ವಿ.ಎನ್.ನಾಗೇಶ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *