September 13, 2026
0000001

ಹಿರಿಯೂರು :                                     

ವಿಶ್ವಚೇತನ ಸೌಹಾರ್ದ ಸಹಕಾರ ಸಂಘವು 829.05 ಲಕ್ಷ ರೂಗಳ ದುಡಿಯುವ ಬಂಡವಾಳವನ್ನು ಹೊಂದಿದ್ದು, ಪ್ರಸಕ್ತ 2025-26 ನೇ ಸಾಲಿನಲ್ಲಿ 27,60,861.52 ರೂಗಳ ನಿವ್ವಳಲಾಭವನ್ನು ಗಳಿಸಿದ್ದು, ಕಳೆದ ವರ್ಷಕ್ಕಿಂತ ಶೇ.25ಕ್ಕೂ ಹೆಚ್ಚುವರಿ ಲಾಭ ಗಳಿಸಿದೆ ಎಂಬುದಾಗಿ ವಿಶ್ವಚೇತನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಎ.ಲಕ್ಷ್ಮೀಶ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ವಿಶ್ವಚೇತನ ಸೌಹಾರ್ದ ಸಹಕಾರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಚೇತನ ಸೌಹಾರ್ದ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ದಶಮಾನೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ಶೇರು ಬಂಡವಾಳ 64.15 ಲಕ್ಷಗಳಿದ್ದು, ಪ್ರಸಕ್ತ ಸಾಲಿನಲ್ಲಿ 71.61 ಲಕ್ಷಗಳಾಗಿದ್ದು 7.46 ಲಕ್ಷಗಳ ಅಭಿವೃದ್ಧಿ ಆಗಿರುತ್ತದೆ, ನಿಧಿಗಳು ಕಳೆದ ಸಾಲಿನಲ್ಲಿ 31.32 ಲಕ್ಷಗಳಿದ್ದು, ಪ್ರಸಕ್ತ ಸಾಲಿನಲ್ಲಿ 42.86 ಲಕ್ಷಗಳಿಗೆ ಏರಿಕೆಯಾಗಿ 11.54 ಲಕ್ಷ ಜಾಸ್ತಿಯಾಗಿದೆ, ನಮ್ಮ ಸಹಕಾರಿ ಸಂಘದ ಪ್ರಗತಿಗೆ ಸದಸ್ಯರಾದ ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ಕಾರಣವಾಗಿದೆ ಎಂಬುದಾಗಿ ಹೇಳಿದರು.  

ನಮ್ಮ ಸಹಕಾರಿ ಸಂಘದಲ್ಲಿ ಸಾಲ ಪಡೆದಂತಹ ನಮ್ಮ ಗ್ರಾಹಕರುಗಳು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿಸಿಕೊಂಡು ಬಂದಿದ್ದು, ಸಹಕಾರಿ ಸಂಘದ ಶೇರುದಾರರು, ಗ್ರಾಹಕರು, ಸಹಕಾರಿಯ ನಿರ್ದೇಶಕರು ಹಾಗೂ ಉತ್ತಮ ಸಿಬ್ಬಂದಿಗಳ ಸಹಕಾರವೇ ನಮ್ಮ ಸಂಘದ ಯಶಸ್ಸಿಗೆ ಕಾರಣವಾಗಿದ್ದು, ಅವರುಗಳಿಗೆ ಈ ಮೂಲಕ ಅಭಿನಂದನೆಗಳು ಎಂಬುದಾಗಿ ಹೇಳಿದರು.

ನಮ್ಮ ಸಂಘದ ಸದಸ್ಯರು ಮೃತರಾದರೆ, ಅವರ ಕುಟುಂಬಕ್ಕೆ ಹಣ ಸಹಾಯ, ಉತ್ತಮ ವ್ಯಾಸಂಗ ಮಾಡಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪ್ರಶಸ್ತಿಪತ್ರ, ಪ್ರೋತ್ಸಾಹಧನ ನೀಡಲಾಗುವುದು ಜೊತೆಗೆ ನಮ್ಮ ಸಹಕಾರಿ ಸಂಘದ ಹಿರಿಯ ಸದಸ್ಯರುಗಳಿಗೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರುಗಳಿಗೆ ಸಹಕಾರಿ ಸಂಘದ ವತಿಯಿಂದ ಸನ್ಮಾನ ಮಾಡಲಾಗುತ್ತಿದೆ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಂದೇಮಾತರಂ ಗುರುಕುಲಂ, ತಡಕೋಡ್, ಧಾರವಾಡ ಇವರ ವತಿಯಿಂದ “ಭಾರತಾರ್ಪಣಮಸ್ತು” ಎಂಬ ವಿಶೇಷ ಕಾರ್ಯಕ್ರಮದ ಭಗತ್ ಸಿಂಗ್ ರಂತಹ ಸ್ವತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರಸ್ತುತಪಡಿಸಿ, ವಿದ್ಯಾರ್ಥಿಗಳಲ್ಲಿ  ದೇಶಭಕ್ತಿ, ದೇಶಾಭಿಮಾನವನ್ನು ಜಾಗೃತಿಗೊಳಿಸಲಾಯಿತು.

ಈ ಸಭೆಯಲ್ಲಿ ವಿಶ್ವಚೇತನ ಸೌಹಾರ್ದ ಸಹಕಾರ ಸಂಘದ ಮಾರ್ಗದರ್ಶಕರಾದ ಎಲ್.ಆನಂದಶೆಟ್ಟಿ, ಉಪಾಧ್ಯಕ್ಷರಾದ ಎಸ್.ಜೆ.ರಾಘವೇಂದ್ರ, ನಿರ್ದೇಶಕರುಗಳಾದ ಈ.ಬಾಲಾಜಿ, ಎನ್.ಹರೀಶ್, ಎನ್.ಶ್ರೀನಿವಾಸಬಾಬು, ಜಿ.ಶ್ರೀನಿವಾಸ್, ಜಿ.ಎ.ವಿಶ್ವನಾಥ್, ಜಿ.ಎಸ್.ಪ್ರಸನ್ನಕುಮಾರ್, ಎಂ.ಆರ್.ವೇಣು, ಕೆ.ಎ.ನಾಗಭೂಷಣ್, ಲಿಂಗೇಶ್, ಎಸ್.ಅನಿತಾ, ಶ್ರೀಧರ್, ಶ್ರೀಮತಿ ಪ್ರಿಯಾಂಕ ಆರ್.ನಾಥ್, ಆಡಿಟರ್ ರವೀಂದ್ರನಾಥ್, ಜನಾರ್ಧನ್, ಮೇಲ್ವಿಚಾರಕರಾದ ಮೋಹನ್ ರಾಮ್, ವ್ಯವಸ್ಥಾಪಕರಾದ ವಿ.ಎಸ್.ಸಿದ್ದೇಶ್, ಗುಮಾಸ್ತರಾದ ಎನ್.ರಾಮಮೂರ್ತಿ, ನಿತ್ಯನಿಧಿ ಸಂಗ್ರಹಕಾರರಾದ ಶ್ರೀಮತಿ ಪರಿಮಳ ಸೇರಿದಂತೆ ಸಂಘದ ಸದಸ್ಯರುಗಳು, ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *