September 13, 2026
00001

ಹಿರಿಯೂರು :

ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ, ನಮ್ಮ ದೇಶದ ಕೋಟ್ಯಂತರ ಜನರು, ದೇಶಭಕ್ತರು, ದೇಶಪ್ರೇಮಿಗಳು ಬ್ರಿಟೀಷರ ವಿರುದ್ಧ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಯುವಜನರು ಅರ್ಥಮಾಡಿಕೊಂಡು ಸ್ವಾತಂತ್ರ್ಯವನ್ನು ಸರಿಯಾಗಿ ಉಪಯೋಗಿಸಬೇಕು, ಸ್ವಇಚ್ಛೆಯಂತೆ ನಡೆದುಕೊಳ್ಳಬಾರದು ಎಂಬುದಾಗಿ ಕರ್ನಾಟಕ ಆದಿಜಾಂಬ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.

ವೇದಾವತಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿ ಎದುರು ವಂದೇಮಾತರಂ ಸರ್ಕಲ್ ನಲ್ಲಿ ವಂದೇಮಾತರಂ ಜಾಗೃತಿ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ನಂತರ ಅವರು ಮಾತನಾಡಿದರು.

ವಂದೇ ಮಾತರಂ ಜಾಗೃತಿ ವೇದಿಕೆ ಮೊದಲಿನಿಂದಲೂ ಉತ್ತಮ ಸಾಮಾಜಿಕ ಕೆಲಸ ಮಾಡಿಕೊಂಡು ಬಂದಿದೆ. ರಾಷ್ಟ್ರ ಪ್ರೇಮದಿಂದ ಇಂದು ಶಾಶ್ವತ ಧ್ವಜ ಸ್ಥಾಪನೆ ಮಾಡಿ, ಧ್ವಜಾರೋಹಣ ಮಾಡಿರುವ ಈ ಕೆಲಸ ಬಹಳ ಉತ್ತಮ ಕೆಲಸವಾಗಿದೆ, ಸಂಘಟನೆ ಹೀಗೆ ಉತ್ತಮ ಕೆಲಸಗಳನ್ನು ಮಾಡಲಿ ಸದಾ ನಮ್ಮ ಬೆಂಬಲವಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಯೋಗೇಶ್ ಮಾತನಾಡಿ, ಇಂದಿನ ಯುವಜನತೆ ನಮ್ಮ ತಾಯಿ ನಾಡು, ಹಾಗೂ ನಮ್ಮ ನೆಲ-ಜಲದ ಬಗ್ಗೆ ಪ್ರೀತಿ-ಅಭಿಮಾನ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ಯುವ ಜನರು ದೇಶಪ್ರೇಮವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂಬುದಾಗಿ ಕರೆನೀಡಿದರು.

ಇದೇ ಸಂದರ್ಭದಲ್ಲಿ ವೇದಾವತಿ ನಗರದ ಹಿರಿಯ ನಾಗರೀಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಯುವಘಟಕದ ಅಧ್ಯಕ್ಷ ಪಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ವಿ.ಅರುಣ್ ಕುಮಾರ್, ರೈತ ಘಟಕದ ದೇವರಾಜ ನಾಗಣ್ಣ, ಖಜಾಂಚಿ ಪಿ.ಮಹಾಂತೇಶ, ಮುಖಂಡರಾದ ಹರೀಶ್ , ಜ್ಞಾನೇಶ್, ಕೃಷ್ಣಪ್ಪ, ರಾಜ್ಯ ಸಂಚಾಲಕರಾದ  ಮಸ್ಕಲ್ ವೈ.ನಾಗರಾಜ್, ಕೋಟ್ರೇಶ್ , ವಿನಯ್,  ತಿಪ್ಪೇರುದ್ರಸ್ವಾಮಿ, ಲಕ್ಷ್ಮಣ್,  ತಾಲ್ಲೂಕು ಘಟಕದ ಉಪಾಧ್ಯಕ್ಷ ಕೃಷ್ಣಾನಾಯ್ಕ, ಮಂಜುನಾಥ್, ರೈತ ಘಟಕದ  ಎಸ್.ಕೆ.ರಾಘು , ಜಿ.ದಿನೇಶ್, ಆರ್ ಬಿ ಎನ್ ಶಾಲೆ ಮತ್ತು ಮಾರುತಿ ಶಾಲೆಯ ಮಕ್ಕಳು ವೇದಾವತಿ ನಗರದ ಯುವಕರು ನಾಗರೀಕರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *