
ಹಿರಿಯೂರು:
ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವಾರು ಮಹನೀಯರ ಹೋರಾಟವನ್ನು ಸ್ಮರಿಸುವಂತಹ ನಾಡಿನ ಶ್ರೇಷ್ಠ ರಾಷ್ಟ್ರೀಯ ಹಬ್ಬ ಹಾಗೂ ಇತಿಹಾಸದ ಪುಟಗಳಲ್ಲಿ ಮಹತ್ವದ ದಿನವಾದ ಸ್ವಾತಂತ್ರ್ಯ ದಿನಾಚರಣೆಯು ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆ, ಭ್ರಾತೃತ್ವದ ಕಂಪನ್ನು ನಾಡಿನೆಲ್ಲೆಡೆ ಹರಡಲಿ ಎಂಬುದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ಹಿರಿಯ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪರವರು ಶುಭಹಾರೈಸಿದ್ದಾರೆ.
ಈ ವರ್ಷದ 80ನೇ ಸ್ವಾತಂತ್ರ್ಯ ದಿನಾಚರಣೆಯು ನಾಡಿನ ಸಮಸ್ತ ಜನತೆಗೆ ನಮ್ಮ ರೈತಾಪಿ ವರ್ಗದ ಜನರಿಗೆ, ಕಾರ್ಮಿಕರಿಗೆ, ಆತ್ಮೀಯ ಪತ್ರಕರ್ತ ಬಂಧುಗಳಿಗೆ, ಒಲವಿನ ಸ್ನೇಹಿತ-ಸ್ನೇಹಿತೆಯರಿಗೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಕೋರಿದ್ದಾರೆ.
