September 14, 2026
0001

ಚಿತ್ರದುರ್ಗ :

ಮಳೆನೀರು ಸಂಗ್ರಹಣೆ ಮಾಡುವುದರಿಂದ ನಗರದಲ್ಲಿನ ನೀರಿನ ಕೋರತೆಯನ್ನು ನಿವಾರಿಸಬಹುದಲ್ಲದೆ, ಅನವಶ್ಯಕವಾಗಿ ನೀರು ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ, ಈ ನಿಟ್ಟಿನಲ್ಲಿ ನಗರದಲ್ಲಿ “ಮಳೆ ನೀರು ಸಂಗ್ರಹಣೆ ಅಭಿಯಾನ-2026” ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ನಗರಸಭೆಯ ಕಿರಿಯ ಅಭಿಯಂತರರಾದ ಆರ್.ಕೆ.ಮುನಿಸ್ವಾಮಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಕಾಲೇಜು ಹಾಗೂ ಡಾನ್ ಬೋಸ್ಕ್ ಶಾಲೆಯ ವಿದ್ಯಾರ್ಥಿಗಳಿಂದ ನಗರಸಭೆ ಕಾರ್ಯಾಲಯ ಚಿತ್ರದುರ್ಗ ಹಾಗೂ ರೈನ್ ಟ್ರಸ್ಟ್ (ರಿ) ಸಂಸ್ಥೆ ನೇತೃತ್ವದಲ್ಲಿ ಪೌರಾಡಳಿತ ಇಲಾಖೆಯವರ ಸೂಚನೆಯಂತೆ ನಗರದಲ್ಲಿ ಮಳೆ ನೀರು ಸಂಗ್ರಹಣೆ ಅಭಿಯಾನ-2026 ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ  “ಜನ ಜಾಗೃತಿ ಜಾಥಾ” ಉದ್ಘಾಟಿಸಿ, ಅವರು ಮಾತಾನಾಡಿದರು.

ಹಳೇ ಸರ್ಕಾರಿ ಮೈದಾನದಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿಧ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ನಗರಸಭೆ ಸಿಬ್ಬಂದಿಗಳು, ಕಲಾವಿದರು, ಹೋರಾಟಗಾರರು ಮತ್ತು ವಿವಿಧ ಸಂಘ-ಸಂಘಟನೆಗಳ ಮುಖಂಡರುಗಳ ನೇತೃತ್ವದಲ್ಲಿ ಮಳೆ ನೀರು ಸಂಗ್ರಹಣೆ ಘೋಷಣೆಗಳನ್ನು ಕೂಗುತ್ತಾ ಮಳೆ ನೀರು ಸಂಗ್ರಹಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಜಾಥದಲ್ಲಿ ಪ್ಲೇಕ್ಸ್ ಗಳು, ಬ್ಯಾನರ್ ಗಳು ಮತ್ತು ಆಟೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ವಿದ್ಯಾರ್ಥಿಗಳು ಸಾಗಿದರು. ಜಾಥಾದಲ್ಲಿ ರೈನ್ ಟ್ರಸ್ಟ್ ಅಧ್ಯಕ್ಷರಾದ ಕಸವನಹಳ್ಳಿರಮೇಶ್, ಹೋರಾಟಗಾರರಾದ ಎಂ.ಹೆಚ್.ಶಶಿಧರ್, ರೈನ್ ಟ್ರಸ್ಟ್ ಕಾರ್ಯದರ್ಶಿ ಎಂ.ಮಂಜುನಾಥ್ ಕಳ್ಳಿಹಟ್ಟಿ, ಲಿಂಗರಾಜು, ಕಲಾವಿದರಾದ ರವಿಕುಮಾರ್, ಶಾಂಭವಿ, ನೇತ್ರಾವತಿ ಪಿ.ಆರ್.ಉಷಾ, ಗಿರೀಶ್ ಕವಾಡಿಗರಹಟ್ಟಿ, ಮಲ್ಲೇಶ್ ಮೆದೆಹಳ್ಳಿ, ಯಶವಂತ್ ಮಠದಹಟ್ಟಿ, ನಗರಸಭೆ ಸಿಬ್ಬಂದಿಗಳು, ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳು, ಡಾನ್ ಬೋಸ್ಕ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *