August 7, 2026
00004

ಹಿರಿಯೂರು :

ನಮ್ಮ ತಾಲೂಕಿನಲ್ಲಿ ಮುಂಗಾರು ಮಳೆಯ ಪ್ರಮಾಣ ತುಂಬಾ ಕುಂಠಿತವಾಗಿ ಬಿತ್ತನೆ ಶೂನ್ಯವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ, ಆದ್ದರಿಂದ ಬೆಳೆ ವಿಮೆ ಪಾವತಿ ಮಾಡಿರುವ ಎಲ್ಲಾ ರೈತರಿಗೂ ಪ್ರಿವೆಂಟ್ ಶೋಯಿಂಗ್ ಅಲ್ಲಿ ಹಣ ಪಾವತಿ ಮಾಡಬೇಕು ಎಂಬುದಾಗಿ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ತಾಲೂಕು ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ಬೆಳೆವಿಮೆ ಕುಂದುಕೊರತೆ ಕುರಿತಂತೆ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ರೈತರ ಪರವಾಗಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ರೈತರವಂತಿಕೆ ಸೇರಿ 100% ಕಂಪನಿಗೆ ಜಮಾ ಆಗುತ್ತದೆ ಆದರೆ ಈಗ 25 ಪರ್ಸೆಂಟ್ ರೇವಂಡ್  ಸೋಯಿಂಗ್ ರೈತರಿಗೆ ಕೊಟ್ಟರೆ ಕಂಪನಿಗೆ 75 ಪರ್ಸೆಂಟ್ ಲಾಭವಾಗುತ್ತದೆ ಆದ್ದರಿಂದ ಕನಿಷ್ಠ 50 ಪರ್ಸೆಂಟ್ ಎಲ್ಲ ರೈತರಿಗೂ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಕೃಷಿ ಅಧಿಕಾರಿ ಅಶೋಕ್ ಅವರು ಬೆಳೆವಿಮೆಯ ಬಗ್ಗೆ ಮತ್ತು ಮಳೆಯ ಪ್ರಮಾಣ ಮತ್ತು ಬಿತ್ತನೆ ಪ್ರಮಾಣದ ಬಗ್ಗೆ ಸಭೆಗೆ ವಿವರವಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರರಾದ ಸಿದ್ದೇಶ್ ರವರು ನಿಮ್ಮ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸುತ್ತೇವೆ ಎಂಬುದಾಗಿ ಹೇಳಿದರು.

ಈ ಸಭೆಯಲ್ಲಿ ತೋಟಗಾರಿಕೆ ಎ.ಡಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷರಾದ ವೆಂಕಟೇಶ್, ಆಲೂರುಸಿದ್ದರಾಮಣ್ಣ, ಕನ್ಯಪ್ಪ, ಈರಣ್ಣ, ಅನಂತ್, ಜಗನ್ನಾಥ್, ಜಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *