August 7, 2026
003

ಹಿರಿಯೂರು :                                                    

ರೈನ್ ಟ್ರಸ್ಟ್ ಸಂಸ್ಥೆಯಿಂದ ನಗರದ ಗುರುಭವನದಲ್ಲಿ ಆಗಸ್ಟ್ 2ರಂದು ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೂ ನಿರಂತರವಾಗಿ ಸಂಗೀತ ಸುದೆ ಹರಿಯಲಿದೆ. ಈ ಗಾಯನ ಕಾರ್ಯಕ್ರಮದಲ್ಲಿ ಹಾಡಲು ರಾಜ್ಯದ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಗಾಯಕರು ಬರಲಿದ್ದಾರೆ ಎಂಬುದಾಗಿ ಡಿಸಿಸಿಬ್ಯಾಂಕ್ ನಿರ್ದೇಶಕರಾದ ಮಂಜುನಾಥಮಾಳಿಗೆ ಹೇಳಿದರು.

ನಗರದ ರೈನ್ ಟ್ರಸ್ಟ್  ಕಚೇರಿಯಲ್ಲಿ ಮಾತನಾಡಿದ ಮಂಜುನಾಥ್ ಅವರು ಸಂಗೀತ ಕ್ಷೇತ್ರದ ಗಾನಕೋಗಿಲೆ ದಿವಂಗತ ಎಸ್.ಜಾನಕಿ ಸ್ಮರಣಾರ್ಥ ಗೀತೆಗಳನ್ನು ಸಹ ಹಾಡಲಾಗುವುದು. ಉಳಿದಂತೆ ಎಸ್.ಪಿ ಬಾಲಸುಬ್ರಮಣ್ಯಂ ಡಾ. ರಾಜಕುಮಾರ್, ಅಶ್ವಥ್ , ಪಿ ಬಿ ಶ್ರೀನಿವಾಸ್, ಇತರ ಹೆಸರಾಂತ ಗಾಯಕರ ಗೀತೆಗಳನ್ನು ಸಭಿಕರಿಗೆ ಉಣಬಡಿಸಲಿದ್ದಾರೆ ಎಂದರಲ್ಲದೆ,

ಬದುಕಿನ ಏಕತಾನತೆಯಿಂದ ಒಂದಷ್ಟು ಬಿಡುವು ಮಾಡಿಕೊಂಡು ಸರ್ವರಿಗೂ ಸಂಗೀತ, ಸರ್ವರೋಗಕ್ಕೂ ಸಂಗೀತವೇ ಮದ್ದು ಎನ್ನುವ ನಾಣ್ಣುಡಿಯಂತೆ. ಆಸಕ್ತ ಸಂಗೀತ ಪ್ರೇಮಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಬದುಕಿನಲ್ಲಿ ಬದಲಾವಣೆ ತಂದುಕೊಳ್ಳಬೇಕು ಆ ನಿಟ್ಟಿನಲ್ಲಿ ಈ ಭಾಗದ ಜನರಿಗೆ ಸಂಗೀತದ ರಸದೌತಣವನ್ನು ನೀಡಲಾಗುವುದು ಎಂದು ತಿಳಿಸಿದರು.

ಹೊರಗಡೆಯಿಂದ ಬಂದ ಗಾಯಕರನ್ನು ಪ್ರೀತಿ ಗೌರವಗಳಿಂದ ಸ್ವಾಗತಿಸಿ ಅವರ ಗೀತೆಗಳು ಆಸ್ವಾದಿಸಬೇಕು ಜೊತೆಗೆ ಸ್ಥಳೀಯ ಪ್ರತಿಭೆಗಳು ಎಲೆಮರೆಕಾಯಿಯಂತಿದ್ದು, ಅವರಿಗೆ ವೇದಿಕೆ ನಿರ್ಮಾಣ ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರೈನ್ ಟ್ರಸ್ಟ್  ಅಧ್ಯಕ್ಷರಾದ ಕಸವನಹಳ್ಳಿರಮೇಶ್, ಗಾಯಕರಾದ ರಂಗೇನಹಳ್ಳಿ ರಮೇಶ್ ನಾಯಕ, ಕರ್ಣಾಟಕ ಮೀಡಿಯಾ ನ್ಯೂಸ್ ವರದಿಗಾರರು,  ಹಾಗೂ ಗಾಯಕರಾದ  ಮಹೇಶ್  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *