July 30, 2026
00002

ಹಿರಿಯೂರು :

ನಗರದ ಪ್ರಧಾನ ರಸ್ತೆಯ ಮಧ್ಯಭಾಗದಲ್ಲಿರುವ ಗ್ರಿಲ್ ಗಳು ಹಲವು ದಿನಗಳಿಂದ ಪೇಂಟ್ ಹೋಗಿ ತುಕ್ಕು ಹಿಡಿಯುತ್ತಿರುವುದನ್ನು ಗಮನಿಸಿದ ನಗರಸಭೆ ಪೌರಾಯುಕ್ತರಾದ ಎ.ವಾಸೀಂರವರು ಹೊಸದಾಗಿ ಪೇಂಟ್ ಮಾಡಿಸುವ ಮೂಲಕ ಅವುಗಳಿಗೆ ಜೀವಕಳೆ ತುಂಬಿದ್ದಾರೆ.

ನಗರದ ಸೌಂದರ್ಯ ಹೆಚ್ಚಿಸುವ ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ನಗರಸಭೆಯು ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳ ಸಹಯೋಗದೊಂದಿಗೆ ಗ್ರಿಲ್ ಗಳ ಮೇಲೆ ಅರ್ಥಪೂರ್ಣವಾದ ಸ್ಲೋಗನ್ ಗಳನ್ನು ಬರೆಯಿಸಿದೆ.

ನಗರದ ಸೌಂದರ್ಯವನ್ನು ಹೆಚ್ಚಿಸಲು ಗ್ರಿಲ್ ಗಳಿಗೆ ಪೇಂಟ್ ಮಾಡಲಾಗಿದ್ದು, ಸಾರ್ವಜನಿಕರು, ಸಂಘಸಂಸ್ಥೆಗಳು, ಹಾಗೂ ಸಿನಿಮಾ ಟಾಕೀಸ್ ನವರು ಈ ಸ್ಲೋಗನ್ ಗಳ ಮೇಲೆ ಪೋಸ್ಟರ್ ಅಥವಾ ಪೇಪರ್ ಅಂಟಿಸುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ.

ಒಂದು ವೇಳೆ ಯಾರಾದರೂ ಪೋಸ್ಟರ್ ಅಂಟಿಸಿ, ಸಾರ್ವಜನಿಕರ ಆಸ್ತಿಗೆ ಹಾನಿ ಮಾಡಿದರೆ ಅವರೇ ಸ್ವತಃ ವೆಚ್ಚ ಭರಿಸಿ, ಮತ್ತೆ ಪೇಂಟ್ ಮಾಡಿಸಿ, ಸ್ಲೋಗನ್ ಗಳನ್ನು ಅವರೇ ಬರೆಸಿಕೊಡಬೇಕಾಗುತ್ತದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ವಾಸೀಂರವರು ಎಚ್ಚರಿಕೆ ನೀಡಿದ್ದಾರೆ.    

ನಗರದ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದ್ದು, ನಗರಸಭೆಯ ಈ ಪ್ರಯತ್ನಕ್ಕೆ ಸಾರ್ವಜನಿಕರು ಸಹಕರಿಸಿ, ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವಾಗಿ ಮಾಡಲು  ಕೈಜೋಡಿಸಬೇಕು ಎಂಬುದಾಗಿ ಮನವಿ ಮಾಡಿದರು.

About The Author

Leave a Reply

Your email address will not be published. Required fields are marked *