November 6, 2026
00002

ಹಿರಿಯೂರು :

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಆದೇಶವಾಗಿದ್ದರು ಕೂಡ  ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರಸಭೆಯ ಕೆಲವು ಅಧಿಕಾರಿಗಳು ಬಿಲ್ಡಿಂಗ್ ಗಳನ್ನು ಕಟ್ಟಲು ಪರವಾನಿಗೆ ನೀಡದೆ ಕಾಲಹರಣ ಮಾಡುತ್ತಿರುವುದು ನಿಜಕ್ಕೂ ಖಂಡನೀಯ ಎಂಬುದಾಗಿ ದಲಿತ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷರಾದ ಕೆ.ತಿಮ್ಮರಾಜು ಹೇಳಿದರು.

ತಾಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರಸಭೆಯ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ನಗರಸಭೆಯಲ್ಲಿ ನಡೆಯುತ್ತಿರುವ ಹಲವಾರು ಅಕ್ರಮಗಳ ತನಿಖೆಗೆ ಒತ್ತಾಯಿಸಿ ಹಿರಿಯೂರು ನಗರಸಭೆಯ ಎಇಇ ರವರಿಗೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆಯ ಎಇಇ ರವರು ಒಂದು ವಾರದ ಒಳಗಾಗಿ ಬಿಲ್ಡಿಂಗ್ ನಿರ್ಮಾಣ ಮಾಡಲು  ಪರವಾನಿಯನ್ನು ನೀಡುತ್ತೇವೆ ಎಂಬುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ  ದಲಿತ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷರಾದ ಕೆ.ತಿಮ್ಮರಾಜು, ಕಾರ್ಯಾಧ್ಯಕ್ಷರಾದ ಕೆ.ಪಿ.ಶ್ರೀನಿವಾಸ್, ಉಪಾಧ್ಯಕ್ಷರಾದ ಕೆ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಘಾಟ್ ರವಿ, ಕಾರ್ಯದರ್ಶಿಗಳಾದ ಆರ್.ರಾಘವೇಂದ್ರ. ಓಂಕಾರಮೂರ್ತಿ. ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯಕ್ಷರಾದ ಮಾರುತೇಶ್ ಕುನ್ನಿಕೆರೆ, ಮಹಾನಾಯಕ ದಲಿತಸೇನೆ ರಾಜ್ಯಾಧ್ಯಕ್ಷರಾದ ಮಂಜುನಾಥ್ ತಾಳಿಕೆರೆ , ಉಪಾಧ್ಯಕ್ಷರಾದ ಚಂದ್ರಣ್ಣ ಚೋಳಗುಡ್ಡ, ಪ್ರಜಾಕಲ್ಯಾಣ ಸಮಿತಿಯ ಹರೀಶ್ ಕುಮಾರ್, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಕೆಂಚಪ್ಪ ಆಟೋ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲೇಶ್, ತಾಲೂಕು ಕಾರ್ಯಧ್ಯಕ್ಷರಾದ ರಂಗಸ್ವಾಮಿ, ತಾಲೂಕು ಯುವಘಟಕ ಅಧ್ಯಕ್ಷರಾದ ಅಶೋಕ್, ಯುವಘಟಕ ಉಪಾಧ್ಯಕ್ಷರಾದ ತಿಪ್ಪೇಶ್, ಭಾರತೀಯ ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ಎಳನೀರು, ಸಿದ್ದೇಶ್  ಭರಂಪುರ, ಗುಳ್ಯ ಮಾರುತೇಶ್. ಕದರಪ್ಪ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *