November 6, 2026
0000002

ಹಿರಿಯೂರು :

ಕವಿತೆ ರಚಿಸುವಾಗ ಪ್ರಾಸಕ್ಕಿಂತ ವಸ್ತುನಿಷ್ಠತೆಗೆ ಹೆಚ್ಚು ಒತ್ತು ನೀಡಬೇಕು, ಕವಿಯಾದವರು ತಮ್ಮ ಕವಿತೆಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಬೇಕು, ಕವಿತೆಗೆ ಯಾವ ವಸ್ತುವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಕವಿಯ ಸ್ವಾತಂತ್ರ್ಯ ಎಂಬುದಾಗಿ ಉಪನ್ಯಾಸಕ ಶಫೀವುಲ್ಲಾ ಹೇಳಿದರು.

ತಾಲೂಕಿನ ಗೊಲ್ಲಹಳ್ಳಿಯ ಜಾಗೃತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ ಐಮಂಗಲ ಹೋಬಳಿ ಮಟ್ಟದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿರಂತರ ಅಧ್ಯಯನ ಸಮಾಜದಲ್ಲಿ ಘಟಿಸುವ ಸಂಗತಿಗಳ ಅವಲೋಕನ ಜಗತ್ತಿನಲ್ಲಿ ಬದಲಾಗುತ್ತಿರುವ ಸನ್ನಿವೇಶಗಳು ಜನ ಜೀವನದ ಮೇಲೆ ತೀವ್ರತರ ಪರಿಣಾಮ ಬೀರುವ ಸಂಗತಿಗಳನ್ನು ಬಳಸಿಕೊಂಡು ಅತ್ಯುತ್ತಮ ಎಂಬಂತಹ ಕವಿತೆ ರಚಿಸಲು ಸಾಧ್ಯ ಕವಿಯಾದವನಿಗೆ ಕೇಳಿಸಿಕೊಳ್ಳುವ ಸಹನೆ ತಾಳ್ಮೆ ಇರಬೇಕು ಆಗ ಮಾತ್ರ ಇಂತಹ ಗೋಷ್ಠಿಗಳು ಯಶಸ್ವಿಯಾಗಲು ಸಾಧ್ಯ ಎಂದರಲ್ಲದೆ,

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ನಿರ್ಮಲಮರಡಿಹಳ್ಳಿ ಮಾತನಾಡಿ, ಕವಿಯಾದವರಿಗೆ ಹೊಸತನ ಮುಖ್ಯ ಯಾರನ್ನೂ ಅನುಸರಿಸಲು ಹೋಗಿ, ಅವರ ನೆರಳಾಗುವ ಬದಲು ಮತ್ತೊಬ್ಬರಿಗೆ ಬೆಳಕಾಗಬೇಕು, ನಮ್ಮಲ್ಲಿ ಸಮಸ್ಯೆಗಳಿಗೆ ಬರವಿಲ್ಲ, ಅವಕ್ಕೆ ಸಾಹಿತ್ಯದ ರೂಪ ಕೊಟ್ಟಲ್ಲಿ ಉತ್ಕೃಷ್ಟ ಸಾಹಿತ್ಯ ಸೃಷ್ಟಿಯಾಗುತ್ತದೆ ಉತ್ತಮ ಓದು, ಉತ್ತಮ ಬರವಣಿಗೆ ದಾರಿ ಮಾಡಿಕೊಡುತ್ತದೆ ಅದಕ್ಕಾಗಿ ಕವಿಗಳು ಹೆಚ್ಚಿನ ಅಧ್ಯಯನದಲ್ಲಿ ತೊಡಗಬೇಕು ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಮದ್ದನಕುಂಟೆ ಗೀತಾ ನಾಗಪ್ಪ, ಬಬ್ಬೂರು ತಿಪ್ಪೀರನಾಯಕ, ಶಿವಮೂರ್ತಿ, ಪಿ.ಅಂಬಿಕಾ, ನಿರ್ಮಲಾಮೂರ್ತಿ, ಕವಿ ರಂಗಸ್ವಾಮಿ, ಆರ್.ಎ.ಸ್ವಪ್ನ ಕವನ ವಾಚಿಸಿದರು. ತಿಮ್ಮಣ್ಣ ಸ್ವಾಗತಿಸಿದರು ಕೆ.ಸರಸ್ವತಿ ನಾಗರಾಜು ನಿರೂಪಿಸಿದರು, ಹೆಚ್. ಆರ್. ಶಂಕರ್ ವಂದಿಸಿದರು.

About The Author

Leave a Reply

Your email address will not be published. Required fields are marked *