November 6, 2026
00001

ಹಿರಿಯೂರು :   

ತಾಲೂಕಿನ ಪರಮೇನಹಳ್ಳಿ ಗ್ರಾಮದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಿರಿಯೂರಿಗೆ ಹೋಗಿ ಬರಲು ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಮಾಜಿ ಶಾಸಕ ಮಾಜಿ ಸಚಿವರಾದ ದಿವಂಗತ ಡಿ.ಸುಧಾಕರ್ ಅವರು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರು.

ಸರ್ಕಾರಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಅಪರಿಚಿತ ದ್ವಿಚಕ್ರ ವಾಹನ ಮತ್ತು ಖಾಸಗಿ ಆಟೋರಿಕ್ಷಾಗಳ ಮೇಲೆ ಅವಲಂಬಿತವಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಿರಿಯೂರಿಂದ ಪರಮೇನಹಳ್ಳಿ ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ಸು ಸೌಲಭ್ಯ ಕಲ್ಪಿಸಲಾಗಿದೆ.

ಇದೀಗ ಪರಮೇನಹಳ್ಳಿ ಗ್ರಾಮದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವರ ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆ ಹಿರಿಯೂರು ಹಾಗೂ ಪರಮೇನಹಳ್ಳಿ ಮಾರ್ಗವಾಗಿ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಟ್ಟಿರುವುದು ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದೆ.

About The Author

Leave a Reply

Your email address will not be published. Required fields are marked *