July 29, 2026
004

ಹಿರಿಯೂರು :

ತಾಲೂಕಿನ ಕಳವಿಭಾಗಿಗ್ರಾಮದ ಶ್ರೀಲಕ್ಷ್ಮಿರಂಗನಾಥಸ್ವಾಮಿಯ ಏಕಾದಶಿಯ ಜಾತ್ರಾ ಮಹೋತ್ಸವ ಪ್ರತಿವರ್ಷದಂತೆ ಈ ವರ್ಷವೂ ಏಕಾದಶಿಹಬ್ಬ  ಜುಲೈ 24 ರಿಂದ 29 ವರೆಗೆ ನಡೆಯಲಿದೆ ಎಂಬುದಾಗಿ ದೇವಸ್ಥಾನದ ಭಕ್ತಮಂಡಳಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಿಶೇಷವಾಗಿ ಜುಲೈ 29ರ ಬುಧವಾರದಂದು ಶ್ರೀತಿಮ್ಮಪ್ಪ ದೇವರ ಸನ್ನಿಧಿಯಲ್ಲಿ  ಮಧ್ಯಾಹ್ನ 1 ಘಂಟೆಯಿಂದ ಹೆಜ್ಜೆ ನಮಸ್ಕಾರದೊಂದಿಗೆ ಭಕ್ತಾದಿಗಳು ತಿಮ್ಮಪ್ಪನ ಗುಡಿಯಿಂದ ಶ್ರೀಲಕ್ಷ್ಮಿರಂಗನಾಥ ಸ್ವಾಮಿಯ ದೇವಸ್ಥಾನದವರೆಗೆ ಹೆಜ್ಜೆ ನಡೆಯುತ್ತಾರೆ

ಹರಕೆ ಇರುವ ಭಕ್ತರು ತಲೆಕೂದಲು ಚೋಲೋಪನಯನ ನೀಡುವುದು, ವಿವಿಧ ಧಾರ್ಮಿಕ  ಕಾರ್ಯಗಳು ನಡೆಯುತ್ತವೆ, ದೇವಸ್ಥಾನದ ಸಮಿತಿಯಿಂದ  ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆಯನ್ನು ಮಾಡಿರುತ್ತಾರೆ.

ತಾಲೂಕಿನ ಸುತ್ತಮುತ್ತ  ಗ್ರಾಮಗಳಿಂದ, ವಿವಿಧ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ, ಜಾತ್ರೆ ಸುಗಮವಾಗಿ ನಡೆಯಲು ಜನರು ಸಹಕರಿಸಬೇಕು ಎಂದು ದೇವಸ್ಥಾನದ ಭಕ್ತ ಮಂಡಳಿಯವರು ತಿಳಿಸಿದ್ದಾರೆ.           

ಜಾತ್ರೆ ಅಂಗವಾಗಿ ನಾಟಕ ಪ್ರದರ್ಶನ, ಕಳವಿಭಾಗಿ ಗ್ರಾಮದ ಅಂಬಿಕಾ ಕಲಾಸಂಘದ  ವತಿಯಿಂದ ಊರಿನಲ್ಲಿರುವ ರಂಗಮಂದಿರದಲ್ಲಿ ಸಂಜೆ 10:30 ಕ್ಕೆ ಸರಿಯಾಗಿ ಶ್ರೀದೇವಿ ಮಹಾತ್ಮೆ ಅಥವಾ ಮಹಿಷಾಸುರಮರ್ದಿನಿ ಎನ್ನುವ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.

ಕಲಾವಿದರು ಅಭಿಮಾನಿಗಳು ಆಗಮಿಸುವ ಮೂಲಕ ನಾಟಕವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ರಂಗಭೂಮಿಯ ಕಲಾವಿದ ಹಾಗೂ ರಂಗನಿರ್ದೇಶಕರಾದ ಕಳವಿಭಾಗಿಯ ಆರ್.ರಂಗನಾಥ್ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *