
ಹಿರಿಯೂರು :
ನಗರದ ಅಭಿವೃದ್ಧಿಗಾಗಿ ಸದಾ ನೂತನ ಯೋಜನೆಗಳನ್ನು ಪರಿಚಯಿಸುವ ಮೂಲಕ ಕೊಳಚೆ ಪ್ರದೇಶವನ್ನು ಸಹ ಸುಂದರ ವಸತಿ ಪ್ರದೇಶವಾಗಿ ಪರಿವರ್ತಿಸುವ ಚಾತುರ್ಯತೆ ಹೊಂದಿರುವ, ಇವರು ಮುಟ್ಟಿದ ಕೆಲಸವನ್ನೆಲ್ಲಾ ಅದ್ಭುತವಾಗಿಸುವ ಸ್ಪರ್ಶಮಾಂತ್ರಿಕ, ಇವರು ಕಾಲಿಟ್ಟ ನಗರವನ್ನು ಸುಂದರ ನಗರವನ್ನಾಗಿ ಮಾಡುವ ಸೃಜನಶೀಲಜಾದುಗಾರ, ಅಲ್ಲದೆ ಸರಳ, ಸಜ್ಜನಿಕೆಯ ಕ್ರಿಯಾಶೀಲ ವ್ಯಕ್ತಿತ್ವದ ಜನಮೆಚ್ಚಿದ ಜನಪರ, ಜನಸ್ನೇಹಿ ಅಧಿಕಾರಿ, ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ ಯಶಸ್ವಿ ಕೆಲಸ ನಿರ್ವಹಿಸಿ, ಇದೀಗ ನಿವೃತ್ತಿ ಹೊಂದಿರುವ ಮಹಂತೇಶ್ ರವರಿಗೆ “ಹಿರಿಯೂರುನ್ಯೂಸ್” ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮ ಅತ್ಯಂತ ಆತ್ಮೀಯರು ಹಾಗೂ ನಿವೃತ್ತ ಆಯುಕ್ತರಾದ ಹೆಚ್.ಮಹಂತೇಶ್ ರವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಆ ಭಗವಂತ ಆರೋಗ್ಯ, ಆಯಸ್ಸು ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್ ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.
