July 29, 2026
0002

ಹಿರಿಯೂರು :      

ನೇತಾಜಿ ಬಡಾವಣೆಯಲ್ಲಿ ವಾರ್ಡ್ ನಂಬರ್ 23ರ ನಾಲ್ಕನೇ ಕ್ರಾಸ್ ರಸ್ತೆಯಲ್ಲಿ ಕಳೆದ ಎಂಟು ತಿಂಗಳಿಂದ ಬೀದಿದೀಪ ಕೆಟ್ಟು ಹೋಗಿದ್ದು, ನಗರಸಭೆ ಸಿಬ್ಬಂದಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ರಸ್ತೆಯಲ್ಲಿ ಮಹಿಳೆಯರು, ವಯೋವೃದ್ಧರು, ಮಕ್ಕಳು, ವಾಹನಸವಾರರು ಓಡಾಡುವುದೇ ಕಷ್ಟವಾಗಿದೆ ಎಂಬುದಾಗಿ ಸಾರ್ವಜನಿಕರು ದೂರಿದ್ದಾರೆ.

ನಗರಸಭೆ ಹಲವಾರು ಬಾರಿ ಹೋಗಿ ದೂರು ಸಲ್ಲಿಸಿ ಬಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಈಗಲಾದರೂ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಡಾವಣೆಯ ಹಾಳಾಗಿರುವ ವಿದ್ಯುತ್ ದೀಪವನ್ನು ಸರಿಪಡಿಸುವ ಮೂಲಕ ಕತ್ತಲಾಗಿರುವ ಬೀದಿಯಲ್ಲಿ ಬೆಳಕಾಗಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *