
ಹಿರಿಯೂರು:
ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಪ್ರಸಿದ್ಧಿ ಪಡೆದ ಎಸ್.ಜಾನಕಿರವರ ನಿಧನದಿಂದ ಭಾರತೀಯ ಚಲನಚಿತ್ರರಂಗಕ್ಕೆ ಹಾಗೂ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿಸಕ್ಕರ ಸಂತಾಪವ್ಯಕ್ತಪಡಿಸಿದ್ದಾರೆ.
ಡಾ.ಎಸ್.ಜಾನಕಿ ಅವರು ದೇಶದ 20 ಭಾಷೆಗಳಲ್ಲಿ 48 ಸಾವಿರ ಗೀತೆಗಳನ್ನು ಹಾಡಿ, ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ, ಅವರ ಸರಳತೆ ಸಜ್ಜನಿಕೆ ಭಾರತೀಯ ಚಲನಚಿತ್ರರಂಗದಲ್ಲಿ ಹಾಗೆಯೇ ಉಳಿದಿದೆ, ಸುಮಾರು 20 ಭಾಷೆಗಳಲ್ಲಿ ಗೀತೆಗಳನ್ನು ಹಾಡಿದರೂ ಸಹ ಸ್ವಲ್ಪ ಅಹಂ ಇಲ್ಲದೆ ಎಲ್ಲರನ್ನು ಸದಾ ಪ್ರೀತಿಸುವ ಹಸನ್ಮುಖಿಯಾಗಿದ್ದರು.
ಕನ್ನಡಚಲನಚಿತ್ರರಂಗದಲ್ಲಿ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತನಾಗ್, ಶಂಕರನಾಗ್, ಜೈಜಗದೀಶ್, ದ್ವಾರಕೀಶ್, ಕಲ್ಪನಾ, ಲಕ್ಷ್ಮಿ ,ಭಾರತಿ, ಮಂಜುಳ, ಜಯಮಾಲಾ, ಸರೋಜದೇವಿ ಹೀಗೆ ಹಲವು ನಟ ಮತ್ತು ನಟಿಯರ ಹಾಡುಗಳಿಗೆ ಶಾರೀರವಾಗಿ ಸುಮಾರು ಹತ್ತುಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಗಾಯನ ನೀಡಿದ್ದಾರೆ.
ಚಲನಚಿತ್ರರಂಗಕ್ಕೆ ಹಾಗೂ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಎಸ್.ಜಾನಕಿರವರು ಸಲ್ಲಿಸಿದ ಸೇವೆಯನ್ನು ಗುರುತಿಸಿ, ಇಂತಹ ಸಮಾಜಮುಖಿ ಸೇವೆಯನ್ನು ಪರಿಗಣಿಸಿ, ಎಸ್.ಜಾನಕಿರವರಿಗೆ ಕರ್ನಾಟಕ ಸರ್ಕಾರ ಮರಣೋತ್ತರವಾಗಿ “ಕರ್ನಾಟಕರತ್ನ” ಪ್ರಶಸ್ತಿ ನೀಡಬೇಕು ಎಂಬುದಾಗಿ ಎಸ್.ಜಿ.ರಂಗಸ್ವಾಮಿಸಕ್ಕರ ಒತ್ತಾಯಿಸಿದ್ದಾರೆ.
