July 29, 2026
07

ಹಿರಿಯೂರು :

ಕಳೆದ ವರ್ಷ ಬೆಳೆವಿಮೆ ಕಟ್ಟಿದ ರೈತರಿಗೆ ಈಗಾಗಲೇ ಪರಿಹಾರ ಕೊಡುತ್ತಿದ್ದು, ಬೆಳೆವಿಮೆ ಕಟ್ಟಿಲ್ಲದ ರೈತರಿಗೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ತುರ್ತಾಗಿ ಬೆಳೆನಷ್ಟ ಪರಿಹಾರ ಕೊಡಬೇಕು ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಎಸ್.ವಿ.ರಂಗನಾಥ್ ಆಗ್ರಹಪೂರ್ವಕ ಒತ್ತಾಯ ಮಾಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಭೀಕರ ಬರಗಾಲ ಆವರಿಸಿದೆ. ಬಹುತೇಕ ರೈತರು ತಮ್ಮ ಜಮೀನಿನ ದಾಖಲೆಗಳು ಸರಿ ಇಲ್ಲದ ಕಾರಣ ಪೌತಿ ಖಾತೆ, ಪೋಡಿ ದುರಸ್ತಿ ಇಲ್ಲದೇ ಬೆಳೆವಿಮೆ ಕಟ್ಟಲು ಸಾಧ್ಯವಾಗದ ರೈತರಿಗೆ ಬೆಳೆನಷ್ಟ ಪರಿಹಾರ ನೀಡಿದರೆ, ಈ ವರ್ಷ ತಡವಾಗಿ ಮಳೆ ಬಂದರೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಸಹಾಯ ಆಗುತ್ತದೆ.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಪ್ರತೀ ವರ್ಷ ತಪ್ಪದೇ ರೈತರಿಗೆ ಬೆಳೆನಷ್ಟ ಪರಿಹಾರವನ್ನು ಕೊಟ್ಟಿದ್ದರು. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಏಕೆ ಬೆಳೆನಷ್ಟ ಕೊಡುತ್ತಿಲ್ಲ? ಎಂಬುದಾಗಿ ಸಮಸ್ತ ರೈತ ಬಾಂಧವರ ಪರವಾಗಿ ಸಾಮಾಜಿಕ ಕಾರ್ಯಕರ್ತರಾದ ಎಸ್.ವಿ.ರಂಗನಾಥ್ ಪ್ರಶ್ನಿಸಿದ್ದಾರೆ.

About The Author

Leave a Reply

Your email address will not be published. Required fields are marked *